ರಿಪ್ಪನ್ ಪೇಟೆ : ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾ ಯಾತ್ರೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹಿಂದೂ ಸಮಾಗಮವೇ ಸಾಗಿತು. ಎಲ್ಲಿ ನೋಡಿದರಲ್ಲಿ ಕೇಸರಿಮಯವಾಗಿ ವಿನಾಯಕ ವೃತ್ತ ಕಂಗೊಳಿಸುತ್ತಿತ್ತು.

ಶೋಭಾಯಾತ್ರೆಯು ವಿಶೇಷವಾಗಿ ಗೋಪೂಜೆಯ ಮೂಲಕ ಜಿ. ಎಸ್.ಬಿ ಸಭಾಭವನದ ದಿಂದ ಪ್ರಾರಂಭವಾಯಿತು. ಶೋಭಾಯಾತ್ರೆಯಲ್ಲಿ ಮಹಿಳೆಯರು ಕೇಸರಿ ಬಾವುಟವನ್ನು ಹಿಡಿದು ಕೇಸರಿ ಶಾಲುನ್ನು ಧರಿಸಿ ಘೋಷಣೆಗಳನ್ನ ಕೂಗುತ್ತಿದ್ದರು. ಯುವಕರು, ಪುರುಷರು, ಭಾರತ ಮಾತಾ ಕಿ ಜೈ, ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುತ್ತಾ ಶುಭಾಯಾತ್ರೆಯ ಉತ್ಸಾಹವನ್ನು ಇನ್ನಷ್ಟು ಇಮ್ಮಡಿಗೊಳಿಸಿದರು.

ವಿಶೇಷವಾಗಿ ಮಕ್ಕಳು ರಾಷ್ಟ್ರ ಪುರುಷರ, ಪೌರಾಣಿಕ ವೇಷಭೂಷಣವನ್ನು ಧರಿಸಿ ಶೋಭಯಾತ್ರೆಯ ಮೆರಗನ್ನು ಮತ್ತಷ್ಟು ಹೆಚ್ಚಿಸಿದರು.



ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ಪೂರೈಸಿದ ಸಂಧರ್ಭದಲ್ಲಿ ಹಿಂದೂ ಸಂಗಮ ಕಾರ್ಯಕ್ರಮವನ್ನು ದೇಶದ 1 ಲಕ್ಷಕ್ಕೂ ಅಧಿಕ ಸ್ಥಳಗಳಲ್ಲಿ ನಡೆಸಲಾಗಿದೆ. ರಿಪ್ಪನ್ ಪೇಟೆ ಮಂಡಲ ದ ಹಿಂದೂ ಸಂಗಮ ಕಾರ್ಯಕ್ರಮದ ಶೋಭಯಾತ್ರೆಯೂ ಅತ್ಯಂತ ವಿಜೃಂಭಣೆಯಿಂದ ನಡೆಯಿತು.















Leave a Reply