ಸುಡೂರು ಬೆಂಕಿ ಅವಘಡ – ಘಟನಾ ಸ್ಥಳಕ್ಕೆ ತಹಶೀಲ್ದಾರ್ ಭರತರಾಜ್ ಭೇಟಿ

NAADI NEWS 20260128 014841 0000 ಸುಡೂರು ಬೆಂಕಿ ಅವಘಡ - ಘಟನಾ ಸ್ಥಳಕ್ಕೆ ತಹಶೀಲ್ದಾರ್ ಭರತರಾಜ್ ಭೇಟಿ
Spread the love

ಬೆಂಗಳೂರಿಗೆ ತೆರೆಳುತ್ತಿದ್ದ ಅನ್ನಪೂರ್ಣೇಶ್ವರಿ (SAT)ಎಂಬ ಖಾಸಗಿ ಬಸ್ ಶಿವಮೊಗ್ಗ -ಹೊಸನಗರ ತಾಲೂಕಿನ ಗಡಿಭಾಗವಾದ ಸೂಡೂರು ಸಮೀಪದಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ ಬಸ್ಸಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಕೆಲವೇ ನಿಮಿಷದಲ್ಲಿ ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

img 20260128 wa00082749965661990194237 ಸುಡೂರು ಬೆಂಕಿ ಅವಘಡ - ಘಟನಾ ಸ್ಥಳಕ್ಕೆ ತಹಶೀಲ್ದಾರ್ ಭರತರಾಜ್ ಭೇಟಿ

ಘಟನಾ ಸ್ಥಳಕ್ಕೆ ವಿಷಯ ತಿಳಿದ ಕೂಡಲೇ ತಡರಾತ್ರಿ ಭೇಟಿ  ನೀಡಿದ ತಹಶೀಲ್ದಾರ್ ಭರತ್ ರಾಜ್. ಬೆಂಕಿ ಅವಘಡದ ಪ್ರಕರಣದ ಕುರಿತು  ಪಿ ಎಸ್ ಐ ರಾಜು ರೆಡ್ಡಿ ಅವರಿಂದ ಘಟನೆ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ಪಡೆದರು. ಅದೇ ಸಂದರ್ಭದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಸೂಚನೆಯ ಮೇರೆಗೆ ಅವರ ಆಪ್ತ ಸಹಾಯಕ ಸಣ್ಣಕ್ಕಿ ಮಂಜು ಉಪಸ್ಥಿತರಿದ್ದರು.

20260128 0032402941639348846029656 ಸುಡೂರು ಬೆಂಕಿ ಅವಘಡ - ಘಟನಾ ಸ್ಥಳಕ್ಕೆ ತಹಶೀಲ್ದಾರ್ ಭರತರಾಜ್ ಭೇಟಿ

ತದನಂತರ ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು. ಆ ಸಂದರ್ಭದಲ್ಲಿ ಬಸ್ಸಿನೊಳಗಿನ ಪ್ರಯಾಣದ ಸಂದರ್ಭದಲ್ಲಿನ  ಮಾಹಿತಿಯನ್ನು ಪಡೆದರು.

https://www.instagram.com/reel/DUCR-uzE8Ji/?igsh=eDZpdzM2dGR1andj

ಬಸ್ಸಿನಲ್ಲೆ ಇದ್ದ ವ್ಯಕ್ತಿಯ ಮಾಹಿತಿಯ ಪ್ರಕಾರ ಬಸ್ಸಿನಲ್ಲಿ ಮೊದಲು ಸುಟ್ಟವಾಸನೆ ಬರುತ್ತಿತ್ತು .ಕೆಲವೇ ನಿಮಿಷದಲ್ಲಿ ಜೋರಾದ ಚಿರಾಟ ಬಸ್ಸಿನಲ್ಲಿ ಕೇಳಿಸಿತು. ಬೆಂಕಿ ಮುಂಭಾಗದಲ್ಲಿ ಆವರಿಸಿತು ಎಂದು ಪ್ರಯಾಣಿಕ ತಿಳಿಸಿದ್ದಾನೆ.


Spread the love

Leave a Reply

Your email address will not be published. Required fields are marked *