ನಡೆದಿದ್ದೇನು?
ಬೆಂಗಳೂರಿಗೆ ತೆರೆಳುತ್ತಿದ್ದ ಅನ್ನಪೂರ್ಣೇಶ್ವರಿ ಎಂಬ ಖಾಸಗಿ ಬಸ್ ಶಿವಮೊಗ್ಗ -ಹೊಸನಗರ ತಾಲೂಕಿನ ಗಡಿಭಾಗವಾದ ಸೂಡೂರು ಸಮೀಪದಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ ಬಸ್ಸಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಕೆಲವೇ ನಿಮಿಷದಲ್ಲಿ ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ನಿಟ್ಟೂರಿನಿಂದ ಬೆಂಗಳೂರಿಗೆ ತೆರೆಳುತ್ತಿದ್ದ ಸ್ಲೀಪರ್ ಕೋಚ್ ಬಸ್ ನಲ್ಲಿ 36 ಮಂದಿ ಪ್ರಯಾಣಿಸುತ್ತಿದ್ದರು. ಬಸ್ ಚಲಿಸುವಾಗಲೇ ಬೆಂಕಿ ಕಾಣಿಸಿಕೊಂಡಗ ಚಾಲಕನ ಸಮಯ ಪ್ರಜ್ಞೆಯಿಂದ ಚಾಲಕ ಮರಕ್ಕೆ ಡಿಕ್ಕಿ ಹೊಡೆಸಿ ಬಸ್ ನಿಲ್ಲಿಸಿದ್ದಾನೆ. ಕೂಡಲೇ ಕೆಲವರು ಎಕ್ಸಿಟ್ ಡೋರ್ ನಿಂದ ಜಿಗಿದಿದ್ದಾರೆ. ಅನೇಕರಿಗೆ ಗಾಯಗಳಾಗಿವೆ, ಬ್ಯಾಗು, ಮೊಬೈಲು, ದಾಖಲೆಗಳು ಸಂಪೂರ್ಣ ಬೆಂಕಿಗೆ ಆಹುತಿ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ.

ಬಸ್ಸಿನಲ್ಲೆ ಇದ್ದ ವ್ಯಕ್ತಿಯ ಮಾಹಿತಿಯ ಪ್ರಕಾರ ಬಸ್ಸಿನಲ್ಲಿ ಮೊದಲು ಸುಟ್ಟವಾಸನೆ ಬರುತ್ತಿತ್ತು .ಕೆಲವೇ ನಿಮಿಷದಲ್ಲಿ ಜೋರಾದ ಚಿರಾಟ ಬಸ್ಸಿನಲ್ಲಿ ಕೇಳಿಸಿತು. ಬೆಂಕಿ ಮುಂಭಾಗದಲ್ಲಿ ಆವರಿಸಿತು ಎಂದು ಪ್ರಯಾಣಿಕ ತಿಳಿಸಿದ್ದಾನೆ.

ಘಟನೆಯ ವೇಳೆ 31 ಜನರಿಗೆ ಗಾಯಗಳಾಗಿದ್ದು ಅದರಲ್ಲಿ 8ಜನರಿಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಆ ಪ್ರದೇಶವೂ ಸಂಪೂರ್ಣ ಅರಣ್ಯ ಪ್ರದೇಶವಾಗಿದ್ದು ಸಂಪರ್ಕಿಸಿದ ಕೆಲವೇ ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಬಂದಿದೆ ಹಾಗೂ ತಕ್ಷಣ ಪಿ.ಎಸ್.ಐ ರಾಜು ರೆಡ್ಡಿ ಮತ್ತು ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಚರಣೆ ಕೈಗೊಂಡರು. ಅಗ್ನಿಶಾಮಕದಳದವರು ಆಗಮಿಸಿ ಬೆಂಕಿ ನಂದಿಸಿದರು.
















Leave a Reply