ನಾಳೆ (ಜ.14)ಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದದವರ ಯಾತ್ರೋತ್ಸವ ಮತ್ತು ಇರುಮುಡಿ ಕಟ್ಟುವ ಕಾರ್ಯಕ್ರಮ

NAADI NEWS 20260113 101239 0000 ನಾಳೆ (ಜ.14)ಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದದವರ ಯಾತ್ರೋತ್ಸವ ಮತ್ತು ಇರುಮುಡಿ ಕಟ್ಟುವ ಕಾರ್ಯಕ್ರಮ
Spread the love

ರಿಪ್ಪನ್ ಪೇಟೆ : 30 ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿ ಯಾತ್ರೋತ್ಸವದ ಪ್ರಯುಕ್ತ ನಾಳೆ ದಿ.14-01-2026 ರ ಬುಧವಾರ ಬೆಳಿಗ್ಗೆ 7-00 ರಿಂದ 9-00 ರ ವರೆಗೆ ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ದುರ್ಗಾಪರಮೇಶ್ವರಿ ದೇವರ ಪ್ರಾರ್ಥನೆಯೊಂದಿಗೆ ಶ್ರೀ ಅಯ್ಯಪ್ಪಸ್ವಾಮಿಗೆ ಅಲಂಕಾರ ಹಾಗೂ ಸ್ವಾಮಿಗಳ ಇರುಮುಡಿ ಕಟ್ಟುವ ಕಾರ್ಯಕ್ರಮ ಹಾಗೂ ಮಧ್ಯಾಹ್ನ 1-30 ಕ್ಕೆ ಸಾಮೂಹಿಕ ಅನ್ನ ಸಂತರ್ಪಣೆ ಇರಲಿದೆ.

img 20260110 wa00004349135372595542701 ನಾಳೆ (ಜ.14)ಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದದವರ ಯಾತ್ರೋತ್ಸವ ಮತ್ತು ಇರುಮುಡಿ ಕಟ್ಟುವ ಕಾರ್ಯಕ್ರಮ

  ಅದೇ ದಿನ ಸಂಜೆ 6-40 ಕ್ಕೆ ಶ್ರೀ ಸ್ವಾಮಿಯ ಸನ್ನಿಧಾನದಿಂದ ಶ್ರೀ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದವರೆಗೆ ರಾಜಬೀದಿ ಮೆರವಣಿಗೆ, ಈ ರಾಜಬೀದಿ ಮೇರವಣಿಗೆಯಲ್ಲಿ ಡೊಳ್ಳುಕುಣಿತ ಹಾಗೂ ಭಜನಾ ಕಾರ್ಯಕ್ರಮವಿರುತ್ತದೆ. ನಂತರ ಸ್ವಾಮಿಗಳು ಶ್ರೀ ಕ್ಷೇತ್ರ ಶಬರಿಮಲೆಗೆ ಯಾತ್ರೆಗೆ ಹೊರಡಲಿದ್ದಾರೆ.

img 20260111 wa00027530276422199926871 ನಾಳೆ (ಜ.14)ಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದದವರ ಯಾತ್ರೋತ್ಸವ ಮತ್ತು ಇರುಮುಡಿ ಕಟ್ಟುವ ಕಾರ್ಯಕ್ರಮ

  ಆದ್ದರಿಂದ ಭಕ್ತಾಧಿಗಳು ಈ ಮೇಲ್ಕಂಡ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರೊಂದಿಗೆ ಶ್ರೀ ಅಯ್ಯಪ್ಪಸ್ವಾಮಿಯ ಕೃಪೆಗೆ ಪಾತ್ರರಾಗಲು ಶ್ರೀ ತೀರ್ಥೇಶ್ ಸ್ವಾಮಿ ಹಾಗೂ ಶ್ರೀ ರಮೇಶ್‌ ಸ್ವಾಮಿ, ಗುರುಸ್ವಾಮಿಗಳು ಶ್ರೀ ಹಾಗೂ ಮರಿಸ್ವಾಮಿಗಳು ಮತ್ತು ಭಕ್ತವೃಂದ, ವಿನಾಯಕ ನಗರ ಇವರಿಂದ ಕೋರಲಾಗಿದೆ.

Leave a Reply

Your email address will not be published. Required fields are marked *