ಉಡುಪಿ ಜಿಲ್ಲೆ ದನಗಳ್ಳರ ಬೆನ್ನಟ್ಟಿದ ಪೊಲೀಸರು: ಬೆನವಳ್ಳಿಯಲ್ಲಿ ಕಾರು ಬಿಟ್ಟು ಕಾಡಿನತ್ತ ಪರಾರಿ -ಪೋಲಿಸರ ತೀವ್ರ ಶೋಧ ಕಾರ್ಯ!

1 20260730 092316 0000 ಉಡುಪಿ ಜಿಲ್ಲೆ ದನಗಳ್ಳರ ಬೆನ್ನಟ್ಟಿದ ಪೊಲೀಸರು: ಬೆನವಳ್ಳಿಯಲ್ಲಿ ಕಾರು ಬಿಟ್ಟು ಕಾಡಿನತ್ತ ಪರಾರಿ -ಪೋಲಿಸರ ತೀವ್ರ ಶೋಧ ಕಾರ್ಯ!
Spread the love

ಶಿವಮೊಗ್ಗ :ಡುಪಿ ಜಿಲ್ಲೆಯಲ್ಲಿ ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳನ್ನು ಬೆನ್ನಟ್ಟಿದ ಪೊಲೀಸರು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬೆನವಳ್ಳಿಯಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಉಡುಪಿ ಜಿಲ್ಲೆಯ ದನಗಳ್ಳರು ಕಾರೊಂದರಲ್ಲಿ ದನಗಳನ್ನು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಉಡುಪಿ ಜಿಲ್ಲಾ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ವಾಹನವನ್ನು ನಿಲ್ಲಿಸುವಂತೆ ಸೂಚಿಸಿದರೂ ಆರೋಪಿಗಳು ಪರಾರಿಯಾಗಿದ್ದು, ಆಗುಂಬೆಯಿಂದಲೇ ಪೊಲೀಸರು ಬೆನ್ನಟ್ಟಿದ್ದಾರೆ.
ಚೇಸಿಂಗ್ ವೇಳೆ ಆರೋಪಿಗಳು ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆನವಳ್ಳಿ ಸಮೀಪ ಕಾರನ್ನು ಬಿಟ್ಟು ನಾಲ್ವರು ಕಾಡಿನೊಳಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಸ್ತುತ ಆಗುಂಬೆ ಪೊಲೀಸರು ಹಾಗೂ ರಿಪ್ಪನ್‌ಪೇಟೆ ಪೊಲೀಸರು ಜಂಟಿಯಾಗಿ ಆರೋಪಿಗಳಿಗಾಗಿ ಕಾಡು ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಪೊಲೀಸರ ಶೋಧ ಕಾರ್ಯ ಮುಂದುವರಿದಿದ್ದು, ಆರೋಪಿಗಳ ಬಂಧನದ ಬಳಿಕ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.

ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಲು ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Leave a Reply

Your email address will not be published. Required fields are marked *