ಎರಡು ದಿನಗಳಲ್ಲಿ ಭಾರೀ ಕಾರ್ಯಾಚರಣೆ- 20 ಲೋಡ್ ಮರಳು ವಶ ; ತೀರ್ಥಹಳ್ಳಿಯಲ್ಲಿ ಅಕ್ರಮ ಮರಳು ಮಾಫಿಯಾಗೆ ಶಾಕ್

Screenshot 20260521 210015 Canva ಎರಡು ದಿನಗಳಲ್ಲಿ ಭಾರೀ ಕಾರ್ಯಾಚರಣೆ- 20 ಲೋಡ್ ಮರಳು ವಶ ; ತೀರ್ಥಹಳ್ಳಿಯಲ್ಲಿ ಅಕ್ರಮ ಮರಳು ಮಾಫಿಯಾಗೆ ಶಾಕ್
Spread the love
img 20260110 wa00002900249803064735743 ಎರಡು ದಿನಗಳಲ್ಲಿ ಭಾರೀ ಕಾರ್ಯಾಚರಣೆ- 20 ಲೋಡ್ ಮರಳು ವಶ ; ತೀರ್ಥಹಳ್ಳಿಯಲ್ಲಿ ಅಕ್ರಮ ಮರಳು ಮಾಫಿಯಾಗೆ ಶಾಕ್

ತೀರ್ಥಹಳ್ಳಿ :ತಾಲ್ಲೂಕಿನ ಮಂಡಗದ್ದೆ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು 20 ಲಾರಿ ಲೋಡ್‌ಗಿಂತ ಹೆಚ್ಚಿನ ಮರಳನ್ನು ತಹಸೀಲ್ದಾ‌ರ್ ರಂಜಿತ್ ಅವರ ನೇತೃತ್ವದಲ್ಲಿ ಗುರುವಾರ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ .

img 20260427 wa00135290549067721104599 ಎರಡು ದಿನಗಳಲ್ಲಿ ಭಾರೀ ಕಾರ್ಯಾಚರಣೆ- 20 ಲೋಡ್ ಮರಳು ವಶ ; ತೀರ್ಥಹಳ್ಳಿಯಲ್ಲಿ ಅಕ್ರಮ ಮರಳು ಮಾಫಿಯಾಗೆ ಶಾಕ್

ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮರಳನ್ನು ವಶಕ್ಕೆ ಪಡೆಯಲಾಯಿತು. ಅಕ್ರಮ ಮರಳು ಸಾಗಣೆ ಮತ್ತು ಸಂಗ್ರಹದ ವಿರುದ್ಧ ತಾಲ್ಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದು ಗಮನಾರ್ಹವಾಗಿದೆ. ಇದಕ್ಕೂ ಮುನ್ನ ನಿನ್ನೆ ಅಗ್ರಹಾರ ಹೋಬಳಿಯ ಅಗಳಬಾಗಿಲು ಗ್ರಾಮದಲ್ಲಿಯೂ ಸುಮಾರು 150 ಟನ್‌ಗಿಂತ ಅಧಿಕ ಅಕ್ರಮ ಮರಳನ್ನು ಜಪ್ತಿ ಮಾಡಲಾಗಿತ್ತು. ಎರಡು ದಿನಗಳಲ್ಲಿ ನಡೆದ ನಿರಂತರ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಮಾಫಿಯಾಗೆ ತೀವ್ರ ಎಚ್ಚರಿಕೆ ಸಂದೇಶ ರವಾನೆಯಾಗಿದೆ.

ಸರ್ಕಾರದ ಆಸ್ತಿಯನ್ನು ದೋಚಲು ಯತ್ನಿಸುವವರ ವಿರುದ್ಧ ಯಾವುದೇ ರೀತಿಯ ಸಡಿಲಿಕೆ ಇರುವುದಿಲ್ಲ. ಅಕ್ರಮ ಚಟುವಟಿಕೆಗಳ ವಿರುದ್ಧ ಮುಂದೆಯೂ ನಿರಂತರ ದಾಳಿ ನಡೆಸಲಾಗುವುದು ಎಂದು ತಹಸೀಲ್ದಾರ್ ರಂಜಿತ್‌ ಎಚ್ಚರಿಕೆ ನೀಡಿದ್ದಾರೆ.

img 20260515 wa00064760091451015943496 ಎರಡು ದಿನಗಳಲ್ಲಿ ಭಾರೀ ಕಾರ್ಯಾಚರಣೆ- 20 ಲೋಡ್ ಮರಳು ವಶ ; ತೀರ್ಥಹಳ್ಳಿಯಲ್ಲಿ ಅಕ್ರಮ ಮರಳು ಮಾಫಿಯಾಗೆ ಶಾಕ್

Leave a Reply

Your email address will not be published. Required fields are marked *