ಶಿವಮೊಗ್ಗದಲ್ಲಿ ರಸ್ತೆ ಸುರಕ್ಷತೆಗಾಗಿ ಹೊಸ ಕ್ರಮ: ಟ್ರಾಫಿಕ್ ಸಿಗ್ನಲ್ ಬಳಿ ರಿಫ್ಲೆಕ್ಟರ್ ಹಾಗೂ ಸೋಲಾರ್ ಸ್ಟಡ್ ಅಳವಡಿಕೆ

Blue and Red Voter Education Banner 20260331 160632 0000 scaled ಶಿವಮೊಗ್ಗದಲ್ಲಿ ರಸ್ತೆ ಸುರಕ್ಷತೆಗಾಗಿ ಹೊಸ ಕ್ರಮ: ಟ್ರಾಫಿಕ್ ಸಿಗ್ನಲ್ ಬಳಿ ರಿಫ್ಲೆಕ್ಟರ್ ಹಾಗೂ ಸೋಲಾರ್ ಸ್ಟಡ್ ಅಳವಡಿಕೆ
Spread the love

ಶಿವಮೊಗ್ಗ:ಗರದಲ್ಲಿ ಸಾರ್ವಜನಿಕ ವಾಹನ ಸವಾರರ ಸುರಕ್ಷಿತ ಸಂಚಾರವನ್ನು ಖಚಿತಪಡಿಸಲು ಹಾಗೂ ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ.

ನಗರದ 14 ಟ್ರಾಫಿಕ್ ಸಿಗ್ನಲ್ ಸರ್ಕಲ್‌ಗಳಲ್ಲಿ, ಪ್ರಮುಖ ರಸ್ತೆಗಳು ಹಾಗೂ ರಸ್ತೆ ಹಂಪ್ಸ್ ಇರುವ ಪ್ರದೇಶಗಳಲ್ಲಿ ರಿಫ್ಲೆಕ್ಟರ್ ಕ್ಯಾಟ್ ಐಸ್‌ಗಳು ಮತ್ತು ಸೋಲಾರ್ ರೋಡ್ ಸ್ಟಡ್‌ಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯಿಂದ ವಿಶೇಷವಾಗಿ ರಾತ್ರಿ ವೇಳೆಯಲ್ಲಿ ರಸ್ತೆಗಳು ಸ್ಪಷ್ಟವಾಗಿ ಕಾಣುವಂತೆ ಮಾಡಿ, ವಾಹನ ಸವಾರರಿಗೆ ಗೋಚರತೆಯನ್ನು ಹೆಚ್ಚಿಸುವ ಮೂಲಕ ಅಪಘಾತಗಳನ್ನು ತಡೆಯಲು ಸಹಾಯವಾಗಲಿದೆ.

ಇದಕ್ಕೆ ಜೊತೆಯಾಗಿ ಸಾರ್ವಜನಿಕರು ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ. ಎಲ್ಲಾ ವಾಹನ ಸವಾರರು ತಮ್ಮ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ.

“ಸುರಕ್ಷಿತವಾಗಿ ಚಲಿಸಿ – ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ” ಎಂಬ ಸಂದೇಶದೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

img 20260110 wa00002781760714179508761 ಶಿವಮೊಗ್ಗದಲ್ಲಿ ರಸ್ತೆ ಸುರಕ್ಷತೆಗಾಗಿ ಹೊಸ ಕ್ರಮ: ಟ್ರಾಫಿಕ್ ಸಿಗ್ನಲ್ ಬಳಿ ರಿಫ್ಲೆಕ್ಟರ್ ಹಾಗೂ ಸೋಲಾರ್ ಸ್ಟಡ್ ಅಳವಡಿಕೆ
img 20260325 wa00241303291364985372678 ಶಿವಮೊಗ್ಗದಲ್ಲಿ ರಸ್ತೆ ಸುರಕ್ಷತೆಗಾಗಿ ಹೊಸ ಕ್ರಮ: ಟ್ರಾಫಿಕ್ ಸಿಗ್ನಲ್ ಬಳಿ ರಿಫ್ಲೆಕ್ಟರ್ ಹಾಗೂ ಸೋಲಾರ್ ಸ್ಟಡ್ ಅಳವಡಿಕೆ

Leave a Reply

Your email address will not be published. Required fields are marked *