ಸಹ್ಯಾದ್ರಿ ಸಿರಿ ಕಾರ್ಯಕ್ರಮದಲ್ಲಿ ರಿಪ್ಪನ್ ಪೇಟೆ ಕಾಲೇಜು ವಿದ್ಯಾರ್ಥಿಗಳ ಸಾಧನೆ

Blue and Red Voter Education Banner 20260328 212546 0000 1 scaled ಸಹ್ಯಾದ್ರಿ ಸಿರಿ ಕಾರ್ಯಕ್ರಮದಲ್ಲಿ ರಿಪ್ಪನ್ ಪೇಟೆ ಕಾಲೇಜು ವಿದ್ಯಾರ್ಥಿಗಳ ಸಾಧನೆ
Spread the love

ಶಿವಮೊಗ್ಗ:ಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ ಇವರ ವತಿಯಿಂದ ಇಂದು ಆಯೋಜಿಸಲಾದ ಸಹ್ಯಾದ್ರಿ ಸಿರಿ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಿಪ್ಪನ್ ಪೇಟೆಯ ವಿದ್ಯಾರ್ಥಿಗಳು ಭಾಗವಹಿಸಿ ಗಮನಾರ್ಹ ಸಾಧನೆ ಮೆರೆದಿದ್ದಾರೆ.
ಕಾರ್ಯಕ್ರಮದ ಭಾಗವಾಗಿ ನಡೆದ ಪಥಸಂಚಲನ ಸ್ಪರ್ಧೆಯಲ್ಲಿ ಕಾಲೇಜಿನ 19 ವಿದ್ಯಾರ್ಥಿಗಳ ತಂಡ ಉತ್ತಮ ಪ್ರದರ್ಶನ ನೀಡಿ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಇದೇ ವೇಳೆ ಭಾವಗೀತೆ ವಿಭಾಗದಲ್ಲಿ ವಿದ್ಯಾರ್ಥಿ ನಂದನ್ ಆಲುವಳ್ಳಿ ಪ್ರಥಮ ಸ್ಥಾನವನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

img 20260328 wa00374324754377055617735 ಸಹ್ಯಾದ್ರಿ ಸಿರಿ ಕಾರ್ಯಕ್ರಮದಲ್ಲಿ ರಿಪ್ಪನ್ ಪೇಟೆ ಕಾಲೇಜು ವಿದ್ಯಾರ್ಥಿಗಳ ಸಾಧನೆ
ಭಾವಗೀತೆ ವಿಭಾಗದಲ್ಲಿ ವಿದ್ಯಾರ್ಥಿ ನಂದನ್ ಆಲುವಳ್ಳಿ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಪಥಸಂಚಲನ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಮನ್ವಯ, ಶಿಸ್ತಿನ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ತೃತೀಯ ಸ್ಥಾನ ಪಡೆದು ಕಾಲೇಜಿನ ಹೆಗ್ಗಳಿಕೆಯನ್ನು ಹೆಚ್ಚಿಸಿದೆ. ವಿದ್ಯಾರ್ಥಿಗಳ ಈ ಸಾಧನೆ ಕಾಲೇಜಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಕ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ. ಕುಮಾರ ಎಂ. ಅವರು ನೇತೃತ್ವ ವಹಿಸಿ ಮಾರ್ಗದರ್ಶನ ನೀಡಿದ್ದು, ಅವರ ಪ್ರೇರಣೆಯಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದು ವಿಶೇಷವಾಗಿದೆ.

ಈ ಸಾಧನೆಯ ಹಿನ್ನೆಲೆಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಹಳೆ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಇಂತಹ ಸ್ಪರ್ಧೆಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.

img 20260110 wa00003596421092986514152 ಸಹ್ಯಾದ್ರಿ ಸಿರಿ ಕಾರ್ಯಕ್ರಮದಲ್ಲಿ ರಿಪ್ಪನ್ ಪೇಟೆ ಕಾಲೇಜು ವಿದ್ಯಾರ್ಥಿಗಳ ಸಾಧನೆ
img 20260324 wa00571733298017557962161 ಸಹ್ಯಾದ್ರಿ ಸಿರಿ ಕಾರ್ಯಕ್ರಮದಲ್ಲಿ ರಿಪ್ಪನ್ ಪೇಟೆ ಕಾಲೇಜು ವಿದ್ಯಾರ್ಥಿಗಳ ಸಾಧನೆ

Leave a Reply

Your email address will not be published. Required fields are marked *