ರಿಪ್ಪನಪೇಟೆ : ರಾಜ್ಯಾದ್ಯಂತ ಮತದಾರರ ಪಟ್ಟಿಯ ಮ್ಯಾಪಿಂಗ್/ಪ್ರೋಜೆನಿ ಪ್ರಕ್ರಿಯೆ ವೇಗ ಪಡೆದುಕೊಂಡಿರುವ ನಡುವೆ, ಹೊಸನಗರ ತಾಲ್ಲೂಕಿನ ರಿಪ್ಪನ್ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಾರ್ಯ ಪೂರ್ಣಗೊಳಿಸಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ.
ಕೆಲವು ಮತಗಟ್ಟೆಗಳಲ್ಲಿ ಮ್ಯಾಪಿಂಗ್ ಪ್ರಗತಿ ನಿಧಾನವಾಗಿರುವುದನ್ನು ಗಮನಿಸಿದ ಅಧಿಕಾರಿಗಳು, ಏಪ್ರಿಲ್ 14ರಂದು ವಿಶೇಷ ಮ್ಯಾಪಿಂಗ್ ಕ್ಯಾಂಪ್ ಆಯೋಜಿಸಿದ್ದಾರೆ ಎಂದು ತಹಶೀಲ್ದಾರ್ ಭರತ್ ರಾಜ್ ತಿಳಿಸಿದ್ದಾರೆ.
📍 ಎಲ್ಲಿ?ಗ್ರಾಮ ಪಂಚಾಯಿತಿ ಸಭಾಂಗಣ, ರಿಪ್ಪನ್ಪೇಟೆ
🕥 ಸಮಯ:ಬೆಳಗ್ಗೆ 10:30ರಿಂದ ಸಂಜೆ 5:00ರವರೆಗೆ
ಈ ಕ್ಯಾಂಪ್ ವಿಶೇಷವಾಗಿ ಮತಗಟ್ಟೆ ಸಂಖ್ಯೆ 212, 215, 216, 217, 218, 219 ಮತ್ತು 220 ವ್ಯಾಪ್ತಿಯ ಮತದಾರರಿಗೆ ಅನ್ವಯವಾಗಲಿದೆ.
ಕ್ಯಾಂಪಿನಲ್ಲಿ ಸಂಬಂಧಿಸಿದ BLOಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದು, ಮತದಾರರಿಗೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ.
📌 ತರಬೇಕಾದ ಮುಖ್ಯ ಮಾಹಿತಿ:
2002ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ:
ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಸಂಖ್ಯೆ
ಭಾಗ ಸಂಖ್ಯೆ
ಕ್ರಮ ಸಂಖ್ಯೆ
ಹೆಸರು ಲಭ್ಯವಿಲ್ಲದಿದ್ದರೆ:
ತಂದೆ/ತಾಯಿ ಅಥವಾ ಅಜ್ಜ-ಅಜ್ಜಿಯವರ ಮತದಾರರ ವಿವರಗಳು
📣 ಅಧಿಕಾರಿಗಳ ಮನವಿ:
ಮತದಾರರ ಪಟ್ಟಿಯನ್ನು ನವೀಕರಿಸಲು ಹಾಗೂ ಮ್ಯಾಪಿಂಗ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಈ ಕ್ಯಾಂಪ್ ಮಹತ್ವದ್ದಾಗಿದ್ದು, ಸಂಬಂಧಿಸಿದ ಎಲ್ಲಾ ಮತದಾರರು ಭಾಗವಹಿಸುವಂತೆ ತಹಸೀಲ್ದಾರ್ ಮನವಿ ಮಾಡಿದ್ದಾರೆ.

















Leave a Reply