ರೋಟರಿ ಕ್ಲಬ್‌ನಿಂದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ

Add a heading 20260705 162520 0000 ರೋಟರಿ ಕ್ಲಬ್‌ನಿಂದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ
Spread the love

ನಿಸ್ವಾರ್ಥ ಸೇವೆಯೇ ರೋಟರಿಯ ಧ್ಯೇಯ: ರೊ. ವಸಂತ ಹೋಬಳಿದಾರ್

ರಿಪ್ಪನ್‌ಪೇಟೆ: ಲ್ಲಿನ ರೋಟರಿ ಕ್ಲಬ್ ವತಿಯಿಂದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಯಿತು. ಇದೇ ವೇಳೆ ರೋಟರಿ ಕ್ಲಬ್‌ನ ವಿವಿಧ ಸೇವಾ ಚಟುವಟಿಕೆಗಳಲ್ಲಿ ತೊಡಗಿದ್ದ ಆಶಾ ಕಾರ್ಯಕರ್ತೆಯರನ್ನೂ ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಎಲೆಕ್ಟ್ ಗವರ್ನರ್ ರೊ. ವಸಂತ ಹೋಬಳಿದಾರ್, “ನಿಸ್ವಾರ್ಥ ಸೇವೆಯೇ ರೋಟರಿಯ ಧ್ಯೇಯ. ಸಮಾಜದ ಒಳಿತಿಗಾಗಿ ಕೈಜೋಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಅಗತ್ಯ ನೆರವು ನೀಡುವುದು ಕೂಡ ಸೇವೆಯ ಮಹತ್ವದ ಭಾಗವಾಗಿದೆ” ಎಂದು ಹೇಳಿದರು.

img 20260705 wa00171507626428540942101 ರೋಟರಿ ಕ್ಲಬ್‌ನಿಂದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ



2026–27ನೇ ಸಾಲಿನ ರೋಟರಿ ಕ್ಲಬ್ ಅಧ್ಯಕ್ಷರಾಗಿ ರೊ. ರವೀಂದ್ರ ಬಲ್ಲಾಳ್ ಕೆ. ಹಾಗೂ ಕಾರ್ಯದರ್ಶಿಯಾಗಿ ರೊ. ರಮೇಶ್ ಹೆಬ್ಬಾರ್ (ರಾಮು) ಅಧಿಕಾರ ಸ್ವೀಕರಿಸಿದರು.
ಸಹಾಯಕ ಗವರ್ನರ್ ರೊ. ನಾಗರಾಜ್ ಎಸ್., ರೀಜನಲ್ ಲೆಫ್ಟಿನೆಂಟ್ ರೊ. ವಿಷ್ಣುಮೂರ್ತಿ ಎಸ್.ಎಂ. ಸೇರಿದಂತೆ ಗಣ್ಯರು ಮಾತನಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಶಿಕ್ಷಣ, ರಸ್ತೆ ಸುರಕ್ಷತೆ, ಪರಿಸರ ಸಂರಕ್ಷಣೆ ಹಾಗೂ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದರು.

img 20260705 wa001880166106706482672 ರೋಟರಿ ಕ್ಲಬ್‌ನಿಂದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ
ರಿಪ್ಪನ್‌ಪೇಟೆ ರಸ್ತೆ ಡಿವೈಡರ್‌ನಲ್ಲಿ ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾದ ರೋಟರಿ ಕ್ಲಬ್
ರಿಪ್ಪನ್‌ಪೇಟೆ :ಪಟ್ಟಣದ ವಿನಾಯಕ ವೃತ್ತದಿಂದ ಶಿವಮೊಗ್ಗ–ಹೊಸನಗರ ರಸ್ತೆಯ ಡಿವೈಡರ್‌ನಲ್ಲಿ ರಿಪ್ಪನ್‌ಪೇಟೆ ರೋಟರಿ ಕ್ಲಬ್ ವತಿಯಿಂದ ಗಿಡಗಳನ್ನು ನೆಟ್ಟು ಅವುಗಳಿಗೆ ರಕ್ಷಣಾ ಬೇಲಿ ಅಳವಡಿಸುವ ಕಾರ್ಯ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ರಕ್ತದಾನ ಹಾಗೂ ಆರೋಗ್ಯ ಶಿಬಿರ ಸೇರಿದಂತೆ ವಿವಿಧ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಆಶಾ ಕಾರ್ಯಕರ್ತೆಯರಾದ ಪದ್ಮ, ನಗೀನಾ ಮತ್ತು ನಾಗವೇಣಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಾ. ರಾಜಾನಂದಿನಿ ಕಾಗೋಡು, ಎಂ.ಬಿ. ಲಕ್ಷ್ಮಣಗೌಡ, ಗಣೇಶ್ ಕಾಮತ್, ಜೆ. ರಾಧಾಕೃಷ್ಣ, ರಾಧಾಕೃಷ್ಣ ಆರ್., ಎಂ.ಬಿ. ಮಂಜುನಾಥ್, ಸೆಬಾಸ್ಟಿನ್ ಮ್ಯಾಥ್ಯೂಸ್, ಶಿವಕುಮಾರ್ ಶೆಟ್ಟಿ, ಪ್ರಮೀಳಾ ಎಂ.ಬಿ. ಗೌಡ, ಗಣೇಶ್ ,ರಾಮಚಂದ್ರ ಎಂ,ಅಮೃತ್ ರಮೇಶ್, ಅಮಿತ್ ರವೀಂದ್ರ ಬಲ್ಲಾಳ್, ಸಂಧ್ಯಾ ಜಿ. ಕಾಮತ್, ದೀಪಾ ಸುದೀಂದ್ರ ಹೆಬ್ಬಾರ್, ಹೆಚ್.ಎಂ. ವರ್ತೇಶ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *