ರೈಲ್ವೆ ಹಳಿಗೆ ಉರುಳಿದ ಮರ: ನಾಲ್ಕು ಗಂಟೆಗೂ ಅಧಿಕ ಕಾಲ ರೈಲು ಸಂಚಾರ ಸ್ಥಗಿತ|ಪ್ರಯಾಣಿಕರ ಪರದಾಟ

Addaheading 20260915 235945 0000 ರೈಲ್ವೆ ಹಳಿಗೆ ಉರುಳಿದ ಮರ: ನಾಲ್ಕು ಗಂಟೆಗೂ ಅಧಿಕ ಕಾಲ ರೈಲು ಸಂಚಾರ ಸ್ಥಗಿತ|ಪ್ರಯಾಣಿಕರ ಪರದಾಟ
Spread the love

ರಿಪ್ಪನ್‌ಪೇಟೆ: ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಟರ್‌ಸಿಟಿ ರೈಲಿನ ಮಾರ್ಗದಲ್ಲಿ ಮರವು ರೈಲ್ವೆ ಹಳಿಗೆ ಉರುಳಿಬಿದ್ದ ಪರಿಣಾಮ ಮಂಗಳವಾರ ಮುಂಜಾನೆ ರೈಲು ಸಂಚಾರದಲ್ಲಿ ದಿಢೀರ್ ವ್ಯತ್ಯಯ ಉಂಟಾಗಿ ನೂರಾರು ಪ್ರಯಾಣಿಕರು ಪರದಾಡುವಂತಾಯಿತು.

ಸಾಲು-ಸಾಲು ಹಬ್ಬಗಳ ರಜೆ ಮುಗಿಸಿಕೊಂಡು ತಮ್ಮ ಕೆಲಸ ಕಾರ್ಯಗಳಿಗಾಗಿ ಬೆಂಗಳೂರಿಗೆ ಮರಳುತ್ತಿದ್ದ ಪ್ರಯಾಣಿಕರಿಗೆ ಈ ಅನಿರೀಕ್ಷಿತ ಘಟನೆ ತೀವ್ರ ತೊಂದರೆ ಉಂಟುಮಾಡಿತು.

   ತಾಳಗುಪ್ಪದಿಂದ ಬೆಳಗಿನ ಜಾವ ಸುಮಾರು 5.20ಕ್ಕೆ ಹೊರಟಿದ್ದ ರೈಲು, ನಿಗದಿಯಂತೆ ಬೆಳಗ್ಗೆ 7 ಗಂಟೆಗೆ ಶಿವಮೊಗ್ಗ ಹಾಗೂ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪಬೇಕಾಗಿತ್ತು. ಆದರೆ ಅರಸಾಳು ಬಳಿ ರೈಲ್ವೆ ಹಳಿಗೆ ಮರ ಉರುಳಿಬಿದ್ದಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರೈಲನ್ನು ಆನೆಕೆರೆ ಹಾಗೂ ನೆವಟೂರು ಗ್ರಾಮಗಳ ಮಧ್ಯೆ ಸುರಕ್ಷಿತವಾಗಿ ನಿಲ್ಲಿಸಲಾಯಿತು.

  ಇದರಿಂದ ರೈಲು ನಾಲ್ಕು ಗಂಟೆಗೂ ಅಧಿಕ ಕಾಲ ಒಂದೇ ಸ್ಥಳದಲ್ಲಿ ನಿಲ್ಲುವಂತಾಗಿ, ರೈಲಿನಲ್ಲಿದ್ದ ಪ್ರಯಾಣಿಕರು ತೀವ್ರ ಪರದಾಟ ಅನುಭವಿಸಿದರು.
  ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಹಳಿಯ ಮೇಲಿದ್ದ ಮರವನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾದರು

file 000000003f5c8208a0b120fec3430d9d1719122135278220179 ರೈಲ್ವೆ ಹಳಿಗೆ ಉರುಳಿದ ಮರ: ನಾಲ್ಕು ಗಂಟೆಗೂ ಅಧಿಕ ಕಾಲ ರೈಲು ಸಂಚಾರ ಸ್ಥಗಿತ|ಪ್ರಯಾಣಿಕರ ಪರದಾಟ

Leave a Reply

Your email address will not be published. Required fields are marked *

error: Content is protected !!