ವಾರದಿಂದ ಸ್ಥಗಿತಗೊಂಡ ಕುಡಿಯುವ ನೀರು; ಬಾಳೂರು ಗ್ರಾ.ಪಂ. ಎದುರು ಗ್ರಾಮಸ್ಥರ ದಿಢೀರ್ ಪ್ರತಿಭಟನೆ

ಹೊಸನಗರ ತಾಲೂಕಿನ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರದಿಂದ ಕುಡಿಯುವ ನೀರು ಸ್ಥಗಿತಗೊಂಡ ಹಿನ್ನೆಲೆ ಗ್ರಾಮಸ್ಥರು ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೆಟ್ಟು ನಿಂತ ಮೋಟಾರ್ ದುರಸ್ತಿ ಹಾಗೂ ಪಿಡಿಒ ಕರ್ತವ್ಯಲೋಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಶಾಸಕರ ಮಧ್ಯಪ್ರವೇಶಕ್ಕೆ ಆಗ್ರಹಿಸಿದರು.