SHIVAMOGGA|ರಾಹುಲ್ ಗಾಂಧಿ ವಿರುದ್ಧದ ಪೋಸ್ಟ್ ಪ್ರಕರಣಕ್ಕೆ ಹೈಕೋರ್ಟ್ ಸ್ಟೇ |ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕ ರಾಜೇಶ್ ಹಿರಿಮನೆಗೆ ಬಿಗ್ ರಿಲೀಫ್

Addaheading 20260907 122121 0000 SHIVAMOGGA|ರಾಹುಲ್ ಗಾಂಧಿ ವಿರುದ್ಧದ ಪೋಸ್ಟ್ ಪ್ರಕರಣಕ್ಕೆ ಹೈಕೋರ್ಟ್ ಸ್ಟೇ |ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕ ರಾಜೇಶ್ ಹಿರಿಮನೆಗೆ ಬಿಗ್ ರಿಲೀಫ್
Spread the love

ಶಿವಮೊಗ್ಗ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕ ರಾಜೇಶ್ ಹಿರಿಮನೆಗೆ ಕರ್ನಾಟಕ ಹೈಕೋರ್ಟ್‌ನಿಂದ ಮಹತ್ವದ ಮಧ್ಯಂತರ ರಿಲೀಫ್ ದೊರೆತಿದೆ.
   ಹೊಸನಗರ ತಾಲೂಕಿನ ಮಳಲಿ ಗ್ರಾಮದ ನಿವಾಸಿ ಹಾಗೂ ಶಾಸಕರ ಆಪ್ತ ಸಹಾಯಕ ರಾಜೇಶ್ ಹಿರಿಮನೆ ವಿರುದ್ಧ ದಾಖಲಾಗಿದ್ದ ಪ್ರಕರಣದ ಕೆಳ ನ್ಯಾಯಾಲಯದ ಸಂಪೂರ್ಣ ಮುಂದಿನ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
   ಹೈಕೋರ್ಟ್‌ನ ಪ್ರಕರಣದ ದಾಖಲೆ ಪ್ರಕಾರ, ಹೊಸನಗರದ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ  ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಪ್ರಕ್ರಿಯೆಯನ್ನು ಮುಂದಿನ ವಿಚಾರಣೆವರೆಗೆ ಸ್ಥಗಿತಗೊಳಿಸಲಾಗಿದೆ.

   ಪ್ರಕರಣದ ಹಿನ್ನೆಲೆ:

   ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕ ರಾಜೇಶ್ ಹಿರಿಮನೆ ಅವರು ರಾಹುಲ್ ಗಾಂಧಿ ಅವರ ಮುಖದ ಅರ್ಧ ಭಾಗವನ್ನು ಪಾಕಿಸ್ತಾನ ಸೇನೆಯ ಸಮವಸ್ತ್ರ ಧರಿಸಿರುವ ‘ಅಸಿಮ್ ಮುನೀರ್ ’ ಎಂಬ ಸರ್ವಾಧಿಕಾರಿಯ ಫೋಟೋದೊಂದಿಗೆ ಎಡಿಟ್ ಮಾಡಿ, “ONE AGENDA” ಎಂಬ ಟ್ಯಾಗ್‌ಲೈನ್‌ನೊಂದಿಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

   ಈ ಪೋಸ್ಟ್‌ಗೆ ಸಂಬಂಧಿಸಿದಂತೆ ಹೊಸನಗರ-ನಗರ ಪೊಲೀಸರು BNS ಸೆಕ್ಷನ್ 353(2) ಅಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು

ಹೈಕೋರ್ಟ್‌ನಲ್ಲಿ ಏನಾಯಿತು?   ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಮುಂದೆ ವಿಚಾರಣೆ ನಡೆದಿದೆ. ಆಗಸ್ಟ್ 28, 2026ರ ಆದೇಶದಲ್ಲಿ, ಕೆಳ ನ್ಯಾಯಾಲಯದ ಪ್ರಕರಣದ ಸಂಪೂರ್ಣ ಮುಂದಿನ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಲಾಗಿದೆ. 

ಪ್ರಕರಣವನ್ನು ಖ್ಯಾತ ವಕೀಲರಾದ ಅರುಣ್ ಶ್ಯಾಮ್ ಅವರ ಮಾರ್ಗದರ್ಶನದಲ್ಲಿ ಸುಯೋಗ್ ವಾದ ಮಂಡಿಸಿದ್ದರು.

file 000000003f5c8208a0b120fec3430d9d2298393130655713678 SHIVAMOGGA|ರಾಹುಲ್ ಗಾಂಧಿ ವಿರುದ್ಧದ ಪೋಸ್ಟ್ ಪ್ರಕರಣಕ್ಕೆ ಹೈಕೋರ್ಟ್ ಸ್ಟೇ |ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕ ರಾಜೇಶ್ ಹಿರಿಮನೆಗೆ ಬಿಗ್ ರಿಲೀಫ್

Leave a Reply

Your email address will not be published. Required fields are marked *