ಹಿಂಡ್ಲೆಮನೆ ಸರ್ಕಾರಿ ಶಾಲೆಯಲ್ಲಿ ಪಂಪ್‌ಸೆಟ್, ವಿದ್ಯುತ್ ಕೇಬಲ್ ಕಳವು

Add a heading 20260801 204328 0000 ಹಿಂಡ್ಲೆಮನೆ ಸರ್ಕಾರಿ ಶಾಲೆಯಲ್ಲಿ ಪಂಪ್‌ಸೆಟ್, ವಿದ್ಯುತ್ ಕೇಬಲ್ ಕಳವು
Spread the love

ರಿಪ್ಪನ್‌ಪೇಟೆ: ಮೀಪದ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲೆಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಾವಿಗೆ ಅಳವಡಿಸಲಾಗಿದ್ದ ವಿದ್ಯುತ್ ಪಂಪ್‌ಸೆಟ್ ಹಾಗೂ ವಿದ್ಯುತ್ ಕೇಬಲ್ ಕಳ್ಳತನವಾಗಿರುವ ಘಟನೆ ತಡರಾತ್ರಿ ನಡೆದಿದೆ.
   ಶಾಲೆಯ ಕುಡಿಯುವ ನೀರಿನ ವ್ಯವಸ್ಥೆಗಾಗಿ ಅಳವಡಿಸಲಾಗಿದ್ದ 1.5 ಹೆಚ್.ಪಿ. ಸಬ್‌ಮರ್ಸಿಬಲ್ ಪಂಪ್‌ಸೆಟ್ ಅನ್ನು ಕಳ್ಳರು ಕಳವು ಮಾಡಿಕೊಂಡಿದ್ದಾರೆ. ಜೊತೆಗೆ ಸುಮಾರು ₹4 ಸಾವಿರ ಮೌಲ್ಯದ ವಿದ್ಯುತ್ ಕೇಬಲ್ ಹಾಗೂ ₹6 ಸಾವಿರ ಮೌಲ್ಯದ ಪಂಪ್‌ಸೆಟ್ ಕಳವಾಗಿರುವುದಾಗಿ ತಿಳಿದುಬಂದಿದೆ.

   ಶನಿವಾರ ಬೆಳಗ್ಗೆ ಶಾಲೆಗೆ ಆಗಮಿಸಿದ ಶಿಕ್ಷಕರು ಪಂಪ್‌ಸೆಟ್ ಹಾಗೂ ಕೇಬಲ್ ಕಾಣೆಯಾಗಿರುವುದನ್ನು ಗಮನಿಸಿ ತಕ್ಷಣ ಎಸ್‌ಡಿಎಂಸಿ ಸದಸ್ಯರು, ಸಂಬಂಧಿತ ಅಧಿಕಾರಿಗಳು ಹಾಗೂ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *