
ಶಿವಮೊಗ್ಗ: ಸಮನ್ವಯ ಶಿಕ್ಷಣ ಯೋಜನೆಯಡಿ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಖಾಲಿ ಇರುವ ಬಿಐಆರ್‌ಟಿ (ಪ್ರಾಥಮಿಕ ಮತ್ತು ಪ್ರೌಢಶಾಲೆ) ಹುದ್ದೆಗಳಿಗೆ ನೇರ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
2026-27ನೇ ಸಾಲಿಗೆ ಮಂಜೂರಾದ ಈ ಹುದ್ದೆಗಳಿಗೆ ನಿಗದಿತ ವಿದ್ಯಾರ್ಹತೆ ಹೊಂದಿರುವ ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 18ರಂದು ಸಂಜೆ 5.30ರೊಳಗಾಗಿ ಉಪನಿರ್ದೇಶಕರು (ಆಡಳಿತ) ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ, ಶಿವಮೊಗ್ಗ ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ. ಅರ್ಜಿಯಲ್ಲಿ ಅಭ್ಯರ್ಥಿಗಳು ತಮ್ಮ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ:
ಪ್ರಾಥಮಿಕ ಹಂತ (1 ರಿಂದ 5ನೇ ತರಗತಿ): ಆರ್‌ಸಿಐ ಅನುಮೋದಿತ ಸಂಸ್ಥೆಯಿಂದ ವಿಶೇಷ ಶಿಕ್ಷಣದಲ್ಲಿ ಡಿ.ಇಡಿ ಪದವಿ ಹಾಗೂ ಮಾನ್ಯ ಆರ್‌ಸಿಐ ಸಿಆರ್‌ಆರ್ ಸಂಖ್ಯೆ ಹೊಂದಿರಬೇಕು. ಅಥವಾ ವಿಶೇಷ ಶಿಕ್ಷಣದಲ್ಲಿ ಡಿ.ಇಡಿಗೆ ಸಮನಾದ ಡಿ.ಇ.ಐ.ಎಡ್ ಮತ್ತು ಆರ್‌ಸಿಐ ಸಿಆರ್‌ಆರ್ ಸಂಖ್ಯೆ ಹೊಂದಿರಬೇಕು. ಅಂತರ್ಗತ ಶಿಕ್ಷಣದಲ್ಲಿ ಅಡ್ಡ ಅಂಗವಿಕಲತೆ ಕ್ಷೇತ್ರದಲ್ಲಿ 6 ತಿಂಗಳ ಬೋಧನಾ ತರಬೇತಿ ಪಡೆದಿರಬೇಕು.
ಪ್ರೌಢಶಾಲಾ ಹಂತ (7 ರಿಂದ 12 ನೇ ತರಗತಿ): ಆರ್‌ಸಿಐ ಅನುಮೋದಿತ ಸಂಸ್ಥೆಯಿಂದ ವಿಶೇಷ ಶಿಕ್ಷಣದಲ್ಲಿ ಬಿ.ಇಡಿ ಪದವಿ ಮತ್ತು ಮಾನ್ಯ ಆರ್‌ಸಿಐ ಸಿಆರ್‌ಆರ್ ಸಂಖ್ಯೆ ಹೊಂದಿರಬೇಕು. ಅಥವಾ ವಿಶೇಷ ಶಿಕ್ಷಣದಲ್ಲಿ ವಿಶೇಷ ಬಿ.ಇಡಿಗೆ ಸಮನಾದ ಮಾನ್ಯತೆ ಪಡೆದ ವಿದ್ಯಾರ್ಹತೆಯೊಂದಿಗೆ ಬಿ.ಇಡಿ ಪದವಿ ಮತ್ತು ಆರ್‌ಸಿಐ ಸಿಆರ್‌ಆರ್ ಸಂಖ್ಯೆ ಹೊಂದಿರಬೇಕು ಹಾಗೂ ಅಂತರ್ಗತ ಶಿಕ್ಷಣದಲ್ಲಿ ಅಡ್ಡ ಅಂಗವಿಕಲತೆ ಕ್ಷೇತ್ರದಲ್ಲಿ 6 ತಿಂಗಳ ಬೋಧನಾ ತರಬೇತಿ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗದ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಗೆ ಸಂಪರ್ಕಿಸಬಹುದು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ತಿಳಿಸಿದ್ದಾರೆ.














Leave a Reply