ಬೆಳ್ಳೂರು: ಸ್ಥಳೀಯ ಸರ್ಕಾರಿ ಪ್ರೌಢಶಾಲೆ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ. ಒಟ್ಟು 29 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ.

ಫಲಿತಾಂಶದ ವಿವರ ಹೀಗಿದೆ: 6 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ, 15 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 2 ವಿದ್ಯಾರ್ಥಿಗಳು ಉತ್ತೀರ್ಣ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಉಲ್ಲಾಸ್ ಕನ್ನಡ 124, ಇಂಗ್ಲಿಷ್ 96, ಹಿಂದಿ 100, ಗಣಿತ 94, ವಿಜ್ಞಾನ 97, ಸಮಾಜ 95 ಅಂಕಗಳೊಂದಿಗೆ 625ಕ್ಕೆ 606 96.96% ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ ಎಂದು ಮುಖ್ಯ ಶಿಕ್ಷಕ ಸೋಮಶೇಖರ್ ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡು ಈ ಸಾಧನೆಗೆ ವಿದ್ಯಾರ್ಥಿಗಳ ಪರಿಶ್ರಮ, ಶಾಲೆಯ ಶಿಕ್ಷಕ ಬಳಗ, ಎಸ್‌ಡಿಎಂಸಿ ತಂಡ, ಪೋಷಕರು, ಇಲಾಖಾ ಅಧಿಕಾರಿಗಳು ಎಂದು ಶಾಲಾ ಆಡಳಿತ ಮಂಡಳಿ ಎಂದು ಹೇಳಿದ್ದಾರೆ.
ಶಾಲೆಯ ಈ ಯಶಸ್ಸು ಸ್ಥಳೀಯ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲಾಗಿ ಗುರುತಿಸಿಕೊಂಡಿದೆ.

















Leave a Reply