ಆನಂದಪುರ:ದಾಸಕೊಪ್ಪ ಬಳಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಓರ್ವನ ಸ್ಥಿತಿ ಗಂಭೀರ

Addaheading 20260921 213835 0000 ಆನಂದಪುರ:ದಾಸಕೊಪ್ಪ ಬಳಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಓರ್ವನ ಸ್ಥಿತಿ ಗಂಭೀರ
Spread the love

ಆನಂದಪುರ:ಇಲ್ಲಿನ ಆನಂದಪುರ–ಶಿಕಾರಿಪುರ ಮುಖ್ಯ ರಸ್ತೆಯ ದಾಸಕೊಪ್ಪ ಮಸೀದಿ ಬಳಿ ಸೋಮವಾರ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗೌತಮಪುರದ ಬಿಲಗುಂಜಿ ಗ್ರಾಮಕ್ಕೆ ತೆರಳುತ್ತಿದ್ದ ತೀರ್ಥೇಶ್‌ (ಈಶ್ವರ ಗೌಡ) ಹಾಗೂ ಮಸೀದಿ ಪಕ್ಕದ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಮೊಹಮ್ಮದ್ ಸಿದ್ದಿಕ್‌ (ರಾಜೀವುಲ್ಲಾ) ಅವರ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದೆ.

   ಡಿಕ್ಕಿಯ ತೀವ್ರತೆಗೆ ತೀವ್ರ ಗಾಯಗೊಂಡ ಮೊಹಮ್ಮದ್ ಸಿದ್ದಿಕ್ ಅವರನ್ನು ಆನಂದಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮತ್ತೋರ್ವ ಸವಾರ ತೀರ್ಥೇಶ್ ಅವರನ್ನೂ ಕೂಡ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.

   ವಿಷಯ ತಿಳಿಯುತ್ತಿದ್ದಂತೆ ಆನಂದಪುರ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಪ್ರವೀಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

file 000000003f5c8208a0b120fec3430d9d4141706788181804333 ಆನಂದಪುರ:ದಾಸಕೊಪ್ಪ ಬಳಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಓರ್ವನ ಸ್ಥಿತಿ ಗಂಭೀರ

Leave a Reply

Your email address will not be published. Required fields are marked *

error: Content is protected !!