ಕೋಡೂರು :ಚಿರತೆ ದಾಳಿಗೆ ಕರು ಬಲಿ; ಹಿಂಡ್ಲೆಮನೆಯಲ್ಲಿ ಹೆಚ್ಚಿದ ಆತಂಕ

Addaheading 20261004 190750 0000 ಕೋಡೂರು :ಚಿರತೆ ದಾಳಿಗೆ ಕರು ಬಲಿ; ಹಿಂಡ್ಲೆಮನೆಯಲ್ಲಿ ಹೆಚ್ಚಿದ ಆತಂಕ
Spread the love

ರಿಪ್ಪನ್‌ಪೇಟೆ: ಸಮೀಪದ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲೆಮನೆ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿದ ಪರಿಣಾಮ ಕರುವೊಂದು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಜಾನುವಾರು ಬಲಿಯಾಗಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಹಿಂಡ್ಲೆಮನೆ ಗ್ರಾಮದ ಶ್ರೀಮತಿ ಎಂಬುವರಿಗೆ ಸೇರಿದ ಕರುವನ್ನು ಎಂದಿನಂತೆ ಮೇಯಲು ಬಿಡಲಾಗಿತ್ತು. ಈ ಸಂದರ್ಭದಲ್ಲಿ ಕಾಡುಪ್ರಾಣಿ ದಾಳಿ ನಡೆಸಿದ್ದು, ಕರುವಿನ ಗಂಟಲಿನ ಭಾಗದಲ್ಲಿ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ದಾಳಿಯಿಂದ ಪಾರಾಗಿ ಮನೆ ಕಡೆಗೆ ಬಂದ ಕರು ತೀವ್ರ ರಕ್ತಸ್ರಾವದಿಂದ ಕೆಲವೇ ಸಮಯದಲ್ಲಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಹಿಂಡ್ಲೆಮನೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಓಡಾಟ ಕಂಡುಬರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ಜಾನುವಾರು ಮೇಲೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಚಿರತೆ ಸಂಚಾರದ ಬಗ್ಗೆ ಗ್ರಾಮಸ್ಥರ ಆತಂಕ ಮತ್ತಷ್ಟು ಹೆಚ್ಚಾಗಿದೆ.

file 000000003f5c8208a0b120fec3430d9d8967595370170191577 ಕೋಡೂರು :ಚಿರತೆ ದಾಳಿಗೆ ಕರು ಬಲಿ; ಹಿಂಡ್ಲೆಮನೆಯಲ್ಲಿ ಹೆಚ್ಚಿದ ಆತಂಕ

Leave a Reply

Your email address will not be published. Required fields are marked *

error: Content is protected !!