ಸ್ವದೇಶಿ ಉತ್ಪನ್ನಗಳ ಮಾರಾಟದಿಂದ ದೇಶದ ಪ್ರಗತಿ: ಎನ್. ಸತೀಶ್

Addaheading 20261002 192341 0000 ಸ್ವದೇಶಿ ಉತ್ಪನ್ನಗಳ ಮಾರಾಟದಿಂದ ದೇಶದ ಪ್ರಗತಿ: ಎನ್. ಸತೀಶ್
Spread the love

ರಿಪ್ಪನ್‌ಪೇಟೆ: ಸ್ವದೇಶಿ ಉತ್ಪನ್ನಗಳ ಖರೀದಿ ಹಾಗೂ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಬಹುದು ಎಂದು ಹೊಸನಗರ ಬಿಜೆಪಿ ಮಂಡಲದ ತಾಲ್ಲೂಕು ಅಧ್ಯಕ್ಷ ಎನ್. ಸತೀಶ್ ಹೇಳಿದರು.

ರಿಪ್ಪನ್‌ಪೇಟೆಯಲ್ಲಿ ಗಾಂಧಿ ಜಯಂತಿ ಅಂಗವಾಗಿ ಬಿಜೆಪಿ ರೈತ ಮೋರ್ಚಾ ಹಾಗೂ ಹೊನ್ನೇಸರದ ವಸ್ತ್ರವಿನ್ಯಾಸ ಖಾದಿ ಉದ್ಯಮದ ವತಿಯಿಂದ ಆಯೋಜಿಸಿದ್ದ ಖಾದಿ ಬಟ್ಟೆಗಳು ಮತ್ತು ಕರಕುಶಲ ವಸ್ತುಗಳ ಮಾರಾಟ ಹಾಗೂ ಪ್ರದರ್ಶನ ಮೇಳದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿಯವರು ಚರಕದ ಮೂಲಕ ಸ್ವದೇಶಿ ಬಟ್ಟೆ ತಯಾರಿಸಿ ಬಳಸುವುದರೊಂದಿಗೆ ಸ್ವಾವಲಂಬನೆಯ ಸಂದೇಶವನ್ನು ಸಾರಿದ್ದರು. ದೇಶೀಯ ಉತ್ಪನ್ನಗಳನ್ನು ಖರೀದಿಸಿ ಬಳಸುವ ಮೂಲಕ ‘ಆತ್ಮನಿರ್ಭರ ಭಾರತ’ದ ಪರಿಕಲ್ಪನೆಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು. ಸ್ವದೇಶಿ ಉತ್ಪನ್ನಗಳನ್ನು ಬಳಸುವ ಮೂಲಕ ದೇಶದ ಪ್ರಗತಿಗೆ ಸಹಕರಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರೈತ ಮೋರ್ಚಾ ಅಧ್ಯಕ್ಷ ಶಿವಾನಂದ ಹಿರೇಮಣತಿ, ಆರ್.ಟಿ. ಗೋಪಾಲ್,ಮಹಾಶಕ್ತಿಕೇಂದ್ರದ ಅಧ್ಯಕ್ಷ ಸುಂದರೇಶ್,ಜಿ. ಡಿ ಮಲ್ಲಿಕಾರ್ಜುನ,ತರಕಾರಿ ಯೋಗೇಂದ್ರಪ್ಪ ಗೌಡ, ಪದ್ಮಾ ಸುರೇಶ್, ಸುರೇಶ್ ಸಿಂಗ್, ನಾಗಾರ್ಜುನಸ್ವಾಮಿ, ರೇಖಾ ರವಿ, ಸೀತಾ, ಗೀತಾ, ಶೈಲಾ ಆರ್. ಪ್ರಭು, ಸುಧೀಂದ್ರ ಪೂಜಾರಿ, ರಾಮಚಂದ್ರ,ಕಗ್ಗಲಿ ಲಿಂಗಪ್ಪ, ಗಿರೀಶ್ ಜಂಬಳ್ಳಿ ,ಆನಂದ ಮೆಣಸೆ,ಆದರ್ಶ ಕಲ್ಲೂರು, ರಾಮು ಹೆದ್ದಾರಿಪುರ, ಪಿ. ರಮೇಶ್ ಸೇರಿದಂತೆ ಹೊನ್ನೇಸರದ ವಸ್ತ್ರವಿನ್ಯಾಸ ಖಾದಿ ಉದ್ಯಮದ ಡಿ.ಬಿ. ರುದ್ರಪ್ಪ, ಪುರುಷೋತ್ತಮ, ಮತ್ತಿತರರು ಉಪಸ್ಥಿತರಿದ್ದರು.

file 000000003f5c8208a0b120fec3430d9d8967595370170191577 ಸ್ವದೇಶಿ ಉತ್ಪನ್ನಗಳ ಮಾರಾಟದಿಂದ ದೇಶದ ಪ್ರಗತಿ: ಎನ್. ಸತೀಶ್

Leave a Reply

Your email address will not be published. Required fields are marked *

error: Content is protected !!