ಕೋಡೂರು ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರಾಮಹೋತ್ಸವ ಸೆ. 29ರಿಂದ ಆರಂಭ|ಅ.11ರಿಂದ ನವರಾತ್ರಿ ಉತ್ಸವ; ಹರಿದು ಬರಲಿದೆ ಭಕ್ತಸಾಗರ

Add a heading 20260928 201748 0000 ಕೋಡೂರು ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರಾಮಹೋತ್ಸವ ಸೆ. 29ರಿಂದ ಆರಂಭ|ಅ.11ರಿಂದ ನವರಾತ್ರಿ ಉತ್ಸವ; ಹರಿದು ಬರಲಿದೆ ಭಕ್ತಸಾಗರ
Spread the love

ರಿಪ್ಪನ್‌ಪೇಟೆ: ಜಿಲ್ಲೆಯ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೋಡೂರು ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಿಯ ವಾರ್ಷಿಕ ಜಾತ್ರಾಮಹೋತ್ಸವವು ಸೆಪ್ಟೆಂಬರ್ 29 ರಿಂದ ಆರಂಭಗೊಳ್ಳಲಿದೆ. ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗಿನ ಅವಧಿಯಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಜಾತ್ರೆ ನಡೆಯುವುದು ಈ ಕ್ಷೇತ್ರದ ವಿಶೇಷ ಪರಂಪರೆಯಾಗಿದೆ. ಅದರಂತೆ ಸೆಪ್ಟೆಂಬರ್ 29ರಂದು ಮಂಗಳವಾರ, ಅಕ್ಟೋಬರ್ 2ರಂದು ಶುಕ್ರವಾರ, ಅಕ್ಟೋಬರ್ 6ರಂದು ಮಂಗಳವಾರ ಹಾಗೂ ಅಕ್ಟೋಬರ್ 9ರಂದು ಶುಕ್ರವಾರ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಜಾತ್ರಾ ಮಹೋತ್ಸವಗಳು ನಡೆಯಲಿವೆ.ಜಾತ್ರೆಯ ಅಂಗವಾಗಿ ಶಿವಮೊಗ್ಗ, ಹೊಸನಗರ, ಸಾಗರ, ಸೊರಬ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ದೇವಿಯ ದರ್ಶನ ಹಾಗೂ ವಿಶೇಷ ಪೂಜಾ ಸೇವೆಗಳಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ.ಅ.11ರಿಂದ ನವರಾತ್ರಿ ಉತ್ಸವಜಾತ್ರಾಮಹೋತ್ಸವದ ಬೆನ್ನಲ್ಲೇ ಅಕ್ಟೋಬರ್ 11ರಿಂದ ಅಕ್ಟೋಬರ್ 21ರವರೆಗೆ ಶ್ರೀ ಜೇನುಕಲ್ಲಮ್ಮ ದೇವಾಲಯದಲ್ಲಿ ನವರಾತ್ರಿ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಲಿದೆ.ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿಯ ಪಾರಾಯಣ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿದ್ದು, ವಿಜಯದಶಮಿಯ ಪವಿತ್ರ ದಿನದಂದು ಚಂಡಿಕಾಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.ನವರಾತ್ರಿ ಸಂದರ್ಭದಲ್ಲಿ ವಿವಿಧ ಸೇವೆಗಳನ್ನು ಸಲ್ಲಿಸಲು ಇಚ್ಛಿಸುವ ಭಕ್ತಾದಿಗಳು ಮುಂಚಿತವಾಗಿಯೇ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನ ಜಾತ್ರಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದೆ.

file 000000003f5c8208a0b120fec3430d9d8967595370170191577 ಕೋಡೂರು ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರಾಮಹೋತ್ಸವ ಸೆ. 29ರಿಂದ ಆರಂಭ|ಅ.11ರಿಂದ ನವರಾತ್ರಿ ಉತ್ಸವ; ಹರಿದು ಬರಲಿದೆ ಭಕ್ತಸಾಗರ

Leave a Reply

Your email address will not be published. Required fields are marked *

error: Content is protected !!