ತಮ್ಮಡಿಕೊಪ್ಪ ಕಾಡುಮಲ್ಲಪ್ಪ ಗಂಗಾಧರೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ 2 ಲಕ್ಷ ಅನುದಾನ

Addaheading 20260917 200700 0000 ತಮ್ಮಡಿಕೊಪ್ಪ ಕಾಡುಮಲ್ಲಪ್ಪ ಗಂಗಾಧರೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ 2 ಲಕ್ಷ ಅನುದಾನ
Spread the love

ರಿಪ್ಪನ್ ಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಹೊಸನಗರ ತಾಲೂಕು, ಹೆದ್ದಾರಿಪುರ ವಲಯದ ಶಬರೀಶನಗರ ಕಾರ್ಯಕ್ಷೇತ್ರದ ವ್ಯಾಪ್ತಿಯ ತಮ್ಮಡಿಕೊಪ್ಪ ಕಾಡುಮಲ್ಲಪ್ಪ ಗಂಗಾಧರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2 ಲಕ್ಷ ಅನುದಾನ ಮಂಜೂರಾಗಿದೆ.

   ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುವ 2 ಲಕ್ಷ ಮೊತ್ತದ ಅನುದಾನದ ಮಂಜೂರಾತಿ ಪತ್ರ ಹಾಗೂ ಚೆಕ್‌ನ್ನು ಜಿಲ್ಲಾ ನಿರ್ದೇಶಕರಾದ ಮುರಳೀಧರ್ ಶೆಟ್ಟಿ ಹಾಗೂ ಕ್ಷೇತ್ರ ಯೋಜನಾಧಿಕಾರಿ ನಾರಾಯಣ್ ಅವರು ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷರಾದ ನಾರಾಯಣಪ್ಪ ಅವರಿಗೆ ಹಸ್ತಾಂತರಿಸಿದರು.

  ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಸತೀಶ್, ಸದಸ್ಯರಾದ ಲೋಕೇಶ್, ಒಕ್ಕೂಟದ ಉಪಾಧ್ಯಕ್ಷ ಸುರೇಶ್, ಯೋಜನೆಯ ವಲಯ ಮೇಲ್ವಿಚಾರಕ ಸುಬ್ರಮಣ್ಯ, ಸೇವಾಪ್ರತಿನಿಧಿ ರೇಷ್ಮಾ, ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರು, ಪಂಚಾಯತ್ ಸದಸ್ಯರು, ಊರಿನ ಮುಖಂಡರು ಹಾಗೂ ಭಜನಾ ತಂಡದ ಸದಸ್ಯರು ಉಪಸ್ಥಿತರಿದ್ದರು.

file 000000003f5c8208a0b120fec3430d9d6708465415186230564 ತಮ್ಮಡಿಕೊಪ್ಪ ಕಾಡುಮಲ್ಲಪ್ಪ ಗಂಗಾಧರೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ 2 ಲಕ್ಷ ಅನುದಾನ

Leave a Reply

Your email address will not be published. Required fields are marked *

error: Content is protected !!