ರಿಪ್ಪನ್ಪೇಟೆ: ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆವಟೂರು ಆನೆಕೆರೆ ಬಳಿ ಕಾನೂನುಬಾಹಿರವಾಗಿ deer meat ಜಿಂಕೆ ಮಾಂಸ ಮಾರಾಟ (Illegal meat selling) ಮಾಡುತ್ತಿದ್ದ ಜಾಲವನ್ನು ಪೊಲೀಸ್ ಅರಣ್ಯ ಸಂಚಾರಿ ದಳ (Forest mobile squad) ಭೇದಿಸಿದೆ. ಕಾರ್ಯಾಚರಣೆಯಲ್ಲಿ ಓರ್ವ ಆರೋಪಿಗಳನ್ನು ಬಂಧಿಸಲಾಗಿದ್ದು, ಸುಮಾರು 34.9 ಕೆ.ಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.
ನೆವಟೂರು ಆನೆಕೆರೆ ಪರಿಸರದಲ್ಲಿ ವನ್ಯಜೀವಿಯ ಮಾಂಸ ಮಾರಾಟ ನಡೆಯುತ್ತಿರುವ ಕುರಿತು ಅರಣ್ಯ ಸಂಚಾರಿ ದಳಕ್ಕೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪಿಎಸ್ಐ ವಿನಾಯಕ ಕೆ. ಅವರ ನೇತೃತ್ವದ ಪೊಲೀಸ್ ತಂಡವು ಸ್ಥಳದ ಮೇಲೆ ದಿಢೀರ್ ದಾಳಿ ನಡೆಸಿತು. ದಾಳಿಯ ವೇಳೆ ಸ್ಥಳದಲ್ಲಿದ್ದ 34.945 ಕೆ.ಜಿ ತೂಕದ ಜಿಂಕೆಯ ದೇಹ ಹಾಗೂ ಮಾಂಸವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ವಿನಾಯಕ ಕೆ. ಅವರೊಂದಿಗೆ ಸಿಬ್ಬಂದಿಗಳಾದ ಆಂಜನೇಯ ಪಾಟೀಲ್, ಬಿ.ಸಿ. ಗಣೇಶ, ಚಂದ್ರಕಾಂತ, ಮಹೇಶ, ಹೆಚ್.ಬಿ. ದೊಡ್ಡಮನಿ ಮತ್ತು ಪ್ರಮೋದಿನಿ ಪಾಲ್ಗೊಂಡಿದ್ದರು. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ (Wildlife Protection Act) ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

















Leave a Reply