ಸಾಗರ ತಾಲೂಕಿನ ಐಗಿನಬೈಲು ನಿವಾಸಿ ಲೋಕಪ್ಪ ಕಾಣೆ; ಮಾಹಿತಿ ನೀಡುವಂತೆ ಕುಟುಂಬದ ಮನವಿ

2 20260801 191750 0001 ಸಾಗರ ತಾಲೂಕಿನ ಐಗಿನಬೈಲು ನಿವಾಸಿ ಲೋಕಪ್ಪ ಕಾಣೆ; ಮಾಹಿತಿ ನೀಡುವಂತೆ ಕುಟುಂಬದ ಮನವಿ
Spread the love

ಸಾಗರ : ತಾಲೂಕಿನ ಐಗಿನಬೈಲು ಗ್ರಾಮದ ನಿವಾಸಿ ಲೋಕಪ್ಪ (47) ಅವರು ಕಾಣೆಯಾಗಿದ್ದು, ಅವರ ಬಗ್ಗೆ ಮಾಹಿತಿ ನೀಡುವಂತೆ ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಲೋಕಪ್ಪ ಅವರಿಗೆ ಮಾತು ಬರುವುದಿಲ್ಲ ಹಾಗೂ ಕಿವಿಯೂ ಕೇಳುವುದಿಲ್ಲ. ಜುಲೈ 21ರಂದು ಸಾಗರಕ್ಕೆ ತೆರಳಿದ್ದ ಅವರು ಬಳಿಕ ಮನೆಗೆ ಮರಳಿಲ್ಲ. ಈ ಸಂಬಂಧ ಕುಟುಂಬಸ್ಥರು ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

   ಲಭ್ಯವಾದ ಮಾಹಿತಿಯ ಪ್ರಕಾರ, ಜುಲೈ 21ರಂದು ಸಂಜೆ ಸುಮಾರು 5 ಗಂಟೆಗೆ ಸಾಗರದಿಂದ ಆನಂದಪುರ ಮಾರ್ಗದ ಬಸ್ ಹತ್ತಬೇಕಿದ್ದ ಲೋಕಪ್ಪ ಅವರು ಸೊರಬ ಬಸ್ ನಿಲ್ದಾಣ ವೃತ್ತದಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಅಲ್ಲಿಂದ ಸಾಗರ ಕಡೆಗೆ ಯಿಂದ ಬರುವ ಬಸ್ ಹತ್ತುವ ಬದಲು ಹಾನಗಲ್‌ಗೆ ತೆರಳುವ ಬಸ್ ಹತ್ತಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

  ಲೋಕಪ್ಪ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆಗೆ ತಿಳಿಸಲು ಅಥವಾ 9632118487 ಹಾಗೂ 89703 72175 ಸಂಖ್ಯೆಗಳಿಗೆ ಸಂಪರ್ಕಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *