ಮೂರು ಪ್ರತ್ಯೇಕ ಪ್ರಕರಣ: ಐವರು ಬಂಧನ, ಎಂಡಿಎಂಎ-ಗಾಂಜಾ ಜಪ್ತಿ!

Screenshot 20260626 183301 Canva 1 ಮೂರು ಪ್ರತ್ಯೇಕ ಪ್ರಕರಣ: ಐವರು ಬಂಧನ, ಎಂಡಿಎಂಎ-ಗಾಂಜಾ ಜಪ್ತಿ!
Spread the love
img 20260110 wa00005187164883470880501 ಮೂರು ಪ್ರತ್ಯೇಕ ಪ್ರಕರಣ: ಐವರು ಬಂಧನ, ಎಂಡಿಎಂಎ-ಗಾಂಜಾ ಜಪ್ತಿ!

ಶಿವಮೊಗ್ಗ: ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಮಾದಕವಸ್ತು ಪ್ರಕರಣಗಳಲ್ಲಿ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಲಕ್ಷಾಂತರ ರೂ. ಮೌಲ್ಯದ ಎಂಡಿಎಂಎ, ಗಾಂಜಾ, ವಾಹನಗಳು ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ರಾಗಿಗುಡ್ಡ ಚಾನಲ್ ಏರಿ ರಸ್ತೆಯ ಸಮೀಪ ದಾಳಿ ನಡೆಸಿದ ಪೊಲೀಸರು, ಅಜರುದ್ದೀನ್ ಅಲಿಯಾಸ್ ಅಜರ್ (26) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯಿಂದ 15 ಗ್ರಾಂ ಎಂಡಿಎಂಎ ಮಾದಕ ವಸ್ತು (ಅಂದಾಜು ಮೌಲ್ಯ ₹1.50 ಲಕ್ಷ), ಮೊಬೈಲ್ ಫೋನ್ ಹಾಗೂ ₹1,600 ನಗದು ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಾಗರ–ಆನಂದಪುರ ರಸ್ತೆಯಲ್ಲಿ ಮುಜ್ಜು ಮತ್ತು ಹಫೀಜುಲ್ಲಾ ಎಂಬುವರನ್ನು ಬಂಧಿಸಲಾಗಿದೆ. ಅವರಿಂದ ಸುಮಾರು 95 ಗ್ರಾಂ ಗಾಂಜಾ ಹಾಗೂ ₹50 ಸಾವಿರ ಮೌಲ್ಯದ ಬೈಕ್ ಜಪ್ತಿ ಮಾಡಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಸಾಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಳಿಕೊಪ್ಪ ಲೇಔಟ್ ಕ್ರಾಸ್ ಬಳಿ ದಾಳಿ ನಡೆಸಿದ ಪೊಲೀಸರು ಅಲ್ತಾಫ್ ಅಶ್ವಾಕ್ (38) ಮತ್ತು ಅಕ್ಟರ್ ಬೇಗ್ (40) ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹4 ಲಕ್ಷ ಮೌಲ್ಯದ 330 ಗ್ರಾಂ ಗಾಂಜಾ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

img 20260604 wa00391909101985945434058 ಮೂರು ಪ್ರತ್ಯೇಕ ಪ್ರಕರಣ: ಐವರು ಬಂಧನ, ಎಂಡಿಎಂಎ-ಗಾಂಜಾ ಜಪ್ತಿ!

Leave a Reply

Your email address will not be published. Required fields are marked *