ಮರಗಳನ್ನು ಸಾಯಿಸುವ ವಿಷದ ಮಾರಾಟ ನಿಷೇಧಕ್ಕೆ ಹನಿಯ ರವಿ ಒತ್ತಾಯ

Screenshot 20260607 202541 Canva scaled ಮರಗಳನ್ನು ಸಾಯಿಸುವ ವಿಷದ ಮಾರಾಟ ನಿಷೇಧಕ್ಕೆ ಹನಿಯ ರವಿ ಒತ್ತಾಯ
Spread the love
img 20260110 wa00002733675379102350066 ಮರಗಳನ್ನು ಸಾಯಿಸುವ ವಿಷದ ಮಾರಾಟ ನಿಷೇಧಕ್ಕೆ ಹನಿಯ ರವಿ ಒತ್ತಾಯ

ಹೊಸನಗರ : ರಿಸರ ನಾಶದಿಂದಾಗಿ ವಿಶ್ವದಾದ್ಯಂತ ಭೀಕರ ಹವಾಮಾನ ವೈಪರೀತ್ಯಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮರಗಳನ್ನು ಸಾಯಿಸುವ ವಿಷಗಳ ಮಾರಾಟ ಮತ್ತು ಅವುಗಳ ಜಾಹೀರಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದೇ ಪ್ರಸಾರವಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಪರಿಸರ ಕಾರ್ಯಕರ್ತ ಹನಿಯ ರವಿ ಕಳವಳ ವ್ಯಕ್ತಪಡಿಸಿದರು.

ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಮಾಧವವನದಲ್ಲಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇತ್ತೀಚಿನ ದಿನಗಳಲ್ಲಿ ಮರಗಳನ್ನು ಒಣಗಿಸಲು ಮತ್ತು ಸಾಯಿಸಲು ಬಳಸುವ ವಿಷಗಳ ಜಾಹೀರಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಕಾಣಿಸುತ್ತಿವೆ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಇಂತಹ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದರೆ ಅವುಗಳ ಖರೀದಿ ಮತ್ತು ಬಳಕೆ ಎಷ್ಟರ ಮಟ್ಟಿಗೆ ನಡೆಯುತ್ತಿದೆಯೆಂಬುದನ್ನು ಊಹಿಸಬಹುದು. ಇದು ಪ್ರಕೃತಿಯ ಮೇಲಿನ ನೇರ ದಾಳಿ” ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳ ಮೂಲಕ ಇಂತಹ ಅಪಾಯಕಾರಿ ಉತ್ಪನ್ನಗಳ ಜಾಹೀರಾತುಗಳಿಗೆ ಅವಕಾಶ ನೀಡುತ್ತಿರುವ ಸಂಸ್ಥೆಗಳು ಮತ್ತು ಅವುಗಳನ್ನು ಮಾರಾಟ ಮಾಡುವವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮರಗಳನ್ನು ಸಾಯಿಸುವ ವಿಷಗಳ ಉತ್ಪಾದನೆ, ಮಾರಾಟ ಹಾಗೂ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದರು.


ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ನಳಿನಚಂದ್ರ ಮಾತನಾಡಿ, ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಆಚರಣೆಯಾಗದೇ ಪ್ರತಿಯೊಬ್ಬರ ಜೀವನಶೈಲಿಯ ಭಾಗವಾಗಬೇಕು ಎಂದರು. “ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಹೆಚ್ಚು ಗಿಡ ನೆಡುವುದು, ನೀರನ್ನು ಸಂರಕ್ಷಿಸುವುದು ಮತ್ತು ಪರಿಸರ ಸ್ನೇಹಿ ಜೀವನಶೈಲಿ ರೂಢಿಸಿಕೊಳ್ಳುವುದು ಇಂದಿನ ಅಗತ್ಯ” ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು. ಭರತನಾಟ್ಯ ವಿದುಷಿ ಶ್ರೀಮತಿ ಆರತಿ ಮಹೇಶ್, ರಾಷ್ಟ್ರೋತ್ಥಾನ ಬಳಗದ ಸಂಚಾಲಕ ಹನಿಯ ಗುರುಮೂರ್ತಿ, ಸಹ ಸಂಚಾಲಕ ಶರತ್ ಕುಮಾರ್, ವಿನಾಯಕ ಪ್ರಭು, ಕೆ.ಎನ್. ಕೃಷ್ಣಮೂರ್ತಿ ಸೇರಿದಂತೆ ಹಲವು ಪರಿಸರಾಸಕ್ತರು ಹಾಜರಿದ್ದರು.

img 20260604 wa00398221386578845634941 ಮರಗಳನ್ನು ಸಾಯಿಸುವ ವಿಷದ ಮಾರಾಟ ನಿಷೇಧಕ್ಕೆ ಹನಿಯ ರವಿ ಒತ್ತಾಯ

Leave a Reply

Your email address will not be published. Required fields are marked *