
ರಿಪ್ಪನ್ ಪೇಟೆ: ಹೊಸನಗರ ತಾಲೂಕು ಗಂಗಾಮತಸ್ಥರ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ರಿಪ್ಪನ್ ಪೇಟೆಯ ಗಂಗಾಮತಸ್ಥರ ಸಂಘದ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಸಮಾಜದ ನೂತನ ಅಧ್ಯಕ್ಷರಾಗಿ ಚಿದಂಬರ ಹೆಚ್.ಬಿ. ಆಯ್ಕೆಯಾಗಿದ್ದಾರೆ.
ಇದೇ ವೇಳೆ ಉಪಾಧ್ಯಕ್ಷರಾಗಿ ಗಣಪತಿ ಬಿ.ಕೆ. ಹಾಗೂ ಬೆನಕಪ್ಪ ಎಂ., ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಕುಮಾರ್ ಜಿ., ಸಹ ಕಾರ್ಯದರ್ಶಿಯಾಗಿ ಪ್ರಕಾಶ್ ಕೆ.ಡಿ., ಖಜಾಂಚಿಯಾಗಿ ರಾಘವೇಂದ್ರ ಜಿ.ಬಿ. ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ರುಕ್ತೇಶ್ ಚಂದಳ್ಳಿ, ನಾಗೇಂದ್ರ ಎಲ್., ದೇವೇಂದ್ರಪ್ಪ ಕೆ., ಶಾಂತಪ್ಪ ಜಿ., ಉಮೇಶ್ ಬಿ., ದಿನೇಶ್ ಅರಳಿಕೊಪ್ಪ, ಸುನಿಲ್ ಟಿ., ಶಿವಾನಂದ ಎಸ್.ಎಂ., ಮಂಜುನಾಥ ಎಸ್. ಬ್ಯಾಣದ ಹಾಗೂ ಶಿವಾನಂದ ಎಸ್. ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಸಮಾಜದ ಮುಖಂಡರು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿ, ಗಂಗಾಮತ ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸಲಿ ಎಂದು ಶುಭ ಹಾರೈಸಿದರು.
ಚುನಾವಣಾ ಕಾರ್ಯವನ್ನು ಹಾಲಿ ಅಧ್ಯಕ್ಷ ಉಮೇಶ್ ಕೆ.ವೈ. ಅವರ ಉಪಸ್ಥಿತಿಯಲ್ಲಿ ಲೋಹಿತ್ ಕುಮಾರ್ ಹೆಚ್. ಹಾಗೂ ನಾಗೇಶ್ ಚಂದಳ್ಳಿ ನೆರವೇರಿಸಿದರು.

















Leave a Reply