ಮ್ಯಾಟ್ರಿಮೋನಿ ಆಪ್ ಪರಿಚಯವೇ ಮೋಸ; ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಲಕ್ಷಾಂತರ ಕಳೆದುಕೊಂಡ ಯುವಕ

ಶಿವಮೊಗ್ಗ :ಮ್ಯಾಟ್ರಿಮೋನಿ ಆಪ್ ಮೂಲಕ ಪರಿ ಚಯವಾದ ಲಂಡನ್ ಮೂಲದ ಯುವ ತಿಯ ಆಮಿಷಕ್ಕೆ ಒಳಗಾದ ಶಿವಮೊಗ್ಗದ ಯುವಕನೊಬ್ಬ ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ 18 ಲಕ್ಷ ರೂ. ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ.

ಮ್ಯಾಟ್ರಿಮೋನಿ ಆಪ್‌ನಲ್ಲಿ ಪ್ರೊಫೈಲ್ ಐಡಿ ಒಂದನ್ನು ಗಮನಿಸಿದ್ದರು. ಅದರಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗಳನ್ನು ಸೇವ್ ಮಾಡಿಕೊಂಡು ವಾಟ್ಸ್ ಆಪ್ ಮೂಲಕ ಸಂಪರ್ಕ ಬೆಳೆಸಿದ್ದರು. ಈ ವೇಳೆ ಆಕೆ ತನ್ನ ಹೆಸರು ವಿಮರ್ಶ ಎಂದು, ತಾನು ಲಂಡನ್‌ನಲ್ಲಿ ಚಿಕ್ಕಪ್ಪನ ಜತೆ ವಾಸವಾಗಿರುವುದಾಗಿ ನಂಬಿಸಿದ್ದಳು. ಬಳಿಕ ಆರೋಪಿಗಳು ವೆಬ್‌ಸೈಟ್ ಒಂದರಲ್ಲಿ ಟ್ರೇಡ್ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ನಂಬಿಸಿ ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು. ಅದಕ್ಕಾಗಿ ವಾಟ್ಸ್ ಆಪ್ ಮೂಲಕ ಬ್ಯಾಂಕ್ ಖಾತೆ ವಿವರಗಳನ್ನು ಕಳುಹಿಸಿಕೊಟ್ಟಿದ್ದರು. ಇದನ್ನು ನಂಬಿದ ಯುವಕ ಹಂತ ಹಂತವಾಗಿ 4 ಬಾರಿ ಆನ್‌ಲೈನ್ ಮೂಲಕ ಒಟ್ಟು 18 ಲಕ್ಷ ರೂ.ಗಳನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು.
ಹಣವನ್ನು ಡಾಲರ್‌ಗೆ ಬದಲಾಯಿಸಿ ಟ್ರೇಡ್ ಮಾಡಿಸಿದಂತೆ ತೋರಿಸಿದ ಆರೋಪಿಗಳು ಟ್ರೇಡಿಂಗ್ ಖಾತೆಯನ್ನು ಡಿಆಕ್ಟಿವೇಟ್ ಮಾಡಿದ್ದಾರೆ. ಇದರಿಂದ ಅನುಮಾನಗೊಂಡು ಸ್ನೇಹಿತರಲ್ಲಿ ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ಅರಿವಾಗಿದೆ. ಘಟನೆ ಸಂಬಂಧ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.














Leave a Reply