ಶಿವಮೊಗ್ಗ – ರಿಪ್ಪನ್ ಪೇಟೆ ಮಾರ್ಗ ಮಧ್ಯದಲ್ಲಿ ಕೈ ಕೊಟ್ಟ ಕೆ ಎಸ್ ಆರ್ ಟಿ ಸಿ ಬಸ್ ; ಪ್ರಯಾಣಿಕರ ಆಕ್ರೋಶ

Screenshot 20260520 201650 Canva ಶಿವಮೊಗ್ಗ - ರಿಪ್ಪನ್ ಪೇಟೆ ಮಾರ್ಗ ಮಧ್ಯದಲ್ಲಿ ಕೈ ಕೊಟ್ಟ ಕೆ ಎಸ್ ಆರ್ ಟಿ ಸಿ ಬಸ್ ; ಪ್ರಯಾಣಿಕರ ಆಕ್ರೋಶ
Spread the love
img 20260110 wa00002467586861428456684 ಶಿವಮೊಗ್ಗ - ರಿಪ್ಪನ್ ಪೇಟೆ ಮಾರ್ಗ ಮಧ್ಯದಲ್ಲಿ ಕೈ ಕೊಟ್ಟ ಕೆ ಎಸ್ ಆರ್ ಟಿ ಸಿ ಬಸ್ ; ಪ್ರಯಾಣಿಕರ ಆಕ್ರೋಶ

ಶಿವಮೊಗ್ಗ : ಮಂಗಳೂರು ಎನ್ನಪೋಯ್ ಆಸ್ಪತ್ರೆ ಯಿಂದ ದಾವಣಗೆರೆಗೆ ಸಂಚರಿಸುತ್ತಿದ್ದ  ಬಸ್  ಈ ಹಿಂದೆ ಹುಲಿಕಲ್ ಘಾಟಿ ಮಾರ್ಗವಾಗಿ ತೀರ್ಥಹಳ್ಳಿ -ಶಿವಮೊಗ್ಗ ಮಾರ್ಗದ ಮೂಲಕ ದಾವಣಗೆರೆ ತಲುಪುತಿತ್ತು ಆದರೆ ಸದ್ಯಕ್ಕೆ ಹುಲಿಕಲ್ ಘಾಟಿ ಸಂಚಾರ ನಿರ್ಬಂಧವಿದ್ದ ಕಾರಣ ಕೊಲ್ಲೂರು – ಹೊಸನಗರ- ರಿಪ್ಪನ್ ಪೇಟೆ – ಶಿವಮೊಗ್ಗ ಮಾರ್ಗವಾಗಿ ದಾವಣಗೆರೆ ಗೆ ಸಂಚರಿಸುತ್ತಿದ್ದ ಬಸ್ ಮಂಗಳವಾರ ಮಧ್ಯರಾತ್ರಿ 2 ಗಂಟೆ ವೇಳೆಗೆ ಏಕಾಏಕಿ ಎಂಜಿನ್ ಬೆಲ್ಟ್ ಸಮಸ್ಯೆಯಿಂದ ಆಯನೂರು ಸಮೀಪದ ಚಾಮುಂಡಿಪುರದಲ್ಲಿ ರಸ್ತೆ ಮಧ್ಯೆ ಬಸ್ ಕೆಟ್ಟು ನಿಂತಿದೆ.

ಬಸ್ ರಿಪೇರಿಗಾಗಿ ಶಿವಮೊಗ್ಗ ಡಿಪೋಗೆ  ತಿಳಿಸಿದಾಗ ಸುಮಾರು 6 ಗಂಟೆ ತಡವಾಗಿ ಪರ್ಯಾಯ ಬಸ್ ರವಾನಿಸಲಾಗಿದೆ.

img 20260427 wa00134454529561023194682 ಶಿವಮೊಗ್ಗ - ರಿಪ್ಪನ್ ಪೇಟೆ ಮಾರ್ಗ ಮಧ್ಯದಲ್ಲಿ ಕೈ ಕೊಟ್ಟ ಕೆ ಎಸ್ ಆರ್ ಟಿ ಸಿ ಬಸ್ ; ಪ್ರಯಾಣಿಕರ ಆಕ್ರೋಶ



ಭರ್ತಿಯಾಗಿದ್ದ ಸಾರಿಗೆಯಲ್ಲಿ ಪ್ರಯಾಣಿಕರು ಸುಮಾರು 6  ಗಂಟೆಗಳ ಕಾಲ ತಡವಾಗಿ ಬಂದ ಪರ್ಯಾಯ ಬಸ್ ಕಾದು ಕಾದು  ಹೈರಾಣಾಗಿ ಪರದಾಡುವಂತಾಯಿತು. ಬಸ್ ನಲ್ಲಿ ಪ್ರಯಾಣಿಸುತ್ತಿದ್ದವರು ಕೆ ಎಸ್ ಆರ್ ಟಿ ಸಿ ಬಸ್ ನ ಕಾರ್ಯಕ್ಷಮತೆ ಮತ್ತು ಸರ್ಕಾರಿ ವ್ಯವಸ್ಥೆಯ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.

ಇನ್ನೋಂದೆಡೆ ಸುಮಾರು ಬುಧವಾರ ಸಂಜೆಯ ತನಕವೂ ಆ ಬಸ್ ರಿಪೇರಿಯಾಗದೆ ಚಾಮುಂಡಿಪುರದ ರಸ್ತೆ ಬದಿಯಲ್ಲೆ ನಿಂತಿರುವುದು ನೋಡಿದರೆ ಸಾರಿಗೆ ಇಲಾಖೆಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಕ್ಷಮತೆ  ಇರುವ ಬಸ್ ಗಳ ಕುರಿತು ಅನುಮಾನ ಮತ್ತು ಆತಂಕವನ್ನು ಉಂಟು ಮಾಡುವಂತಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಸಂದರ್ಭಗಳಲ್ಲಿ ತಕ್ಷಣ ಪರ್ಯಾಯ ಬಸ್ ವ್ಯವಸ್ಥೆ ಮತ್ತು ಸಂಚಾರಕ್ಕೆ ಯೋಗ್ಯವಾದ ಬಸ್ಸುಗಳನ್ನ ರಸ್ತೆಗೆ ಬಿಡುವ ಮೂಲಕ ಸುಖಕರ ಸಂಚಾರಕ್ಕೆ ಅನುಕೂಲ ಮಾಡುತ್ತಾರ ಎಂದು ಕಾದುನೋಡಬೇಕಿದೆ.

img 20260515 wa00062608079837131628966 ಶಿವಮೊಗ್ಗ - ರಿಪ್ಪನ್ ಪೇಟೆ ಮಾರ್ಗ ಮಧ್ಯದಲ್ಲಿ ಕೈ ಕೊಟ್ಟ ಕೆ ಎಸ್ ಆರ್ ಟಿ ಸಿ ಬಸ್ ; ಪ್ರಯಾಣಿಕರ ಆಕ್ರೋಶ

Leave a Reply

Your email address will not be published. Required fields are marked *