ಮೇ 15ರಿಂದ ವಿಶೇಷ ಚೇತನರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ

Blue and Red Voter Education Banner 20260511 184104 0000 scaled ಮೇ 15ರಿಂದ ವಿಶೇಷ ಚೇತನರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ
Spread the love
img 20260110 wa00007468105966588624462 ಮೇ 15ರಿಂದ ವಿಶೇಷ ಚೇತನರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ

ಶಿವಮೊಗ್ಗ : ಸಕ್ಷಮಾ( ವಿಶೇಷ ಚೇತನರ ಸಬಲೀಕರಣಕ್ಕಾಗಿ ಇರುವ ರಾಷ್ಟ್ರೀಯ ಸಂಘಟನೆ ) ಮತ್ತು Association of People with Disabilities ಸಹಯೋಗದಲ್ಲಿ Shivamogga ನಗರದಲ್ಲಿ ವಿಶೇಷ ಚೇತನ ಯುವಕ-ಯುವತಿಯರಿಗಾಗಿ ಉಚಿತ ಉದ್ಯೋಗಧಾರಿತ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

img 20260427 wa00137065144316671170964 ಮೇ 15ರಿಂದ ವಿಶೇಷ ಚೇತನರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ

ಮೇ 15ರಿಂದ ಆರಂಭವಾಗುವ ಈ ತರಬೇತಿ ಶಿಬಿರವು 45 ದಿನಗಳ ಕಾಲ ನಡೆಯಲಿದ್ದು, 18ರಿಂದ 35 ವರ್ಷ ವಯಸ್ಸಿನ ವಿಶೇಷ ಚೇತನರಿಗೆ ಅವಕಾಶ ಕಲ್ಪಿಸಲಾಗಿದೆ. ಶಿಬಿರಕ್ಕೆ ಕೇವಲ 25 ಮಂದಿಗೆ ಮಾತ್ರ ಅವಕಾಶವಿರುವುದರಿಂದ ಆಸಕ್ತರು ಶೀಘ್ರ ನೋಂದಣಿ ಮಾಡಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತರಬೇತಿ ಪೂರ್ಣಗೊಳಿಸಿದ ನಂತರ ಫಲಾನುಭವಿಗಳಿಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು ಸೇರಿದಂತೆ ವಿವಿಧ ನಗರಗಳ ಪ್ರತಿಷ್ಠಿತ ಕಂಪನಿಗಳಲ್ಲಿ ವಿಶೇಷ ಚೇತನರಿಗಾಗಿ ಇರುವ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸಹಾಯ ಮಾಡಲಾಗುತ್ತದೆ.

ತರಬೇತಿ ಕಾರ್ಯಕ್ರಮವು ಹೊಸಮನೆ ಬಡಾವಣೆಯ 4ನೇ ಕ್ರಾಸ್‌ನಲ್ಲಿರುವ ಸಕ್ಷಮಾ ಕಾರ್ಯಾಲಯದಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ: ಕುಮಾರ್ ಶಾಸ್ತ್ರೀ – 9113836523,
ಸುನಿತಾ – 9380374575,ವಿನಾಯಕ ಕಿಣಿ – 6360913683
ಇವರನ್ನು ಸಂಪರ್ಕಿಸಬಹುದಾಗಿದೆ.

img 20260509 wa00048745196523856956147 ಮೇ 15ರಿಂದ ವಿಶೇಷ ಚೇತನರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ

Leave a Reply

Your email address will not be published. Required fields are marked *