ಸಮಾಜದ ಅಭಿವೃದ್ಧಿಗೆ ಜೈನರ ಕೊಡುಗೆ ಅಪಾರ: ಸಂಸದ ಬಿ.ವೈ ರಾಘವೇಂದ್ರ

IMG 20260430 WA0022 ಸಮಾಜದ ಅಭಿವೃದ್ಧಿಗೆ ಜೈನರ ಕೊಡುಗೆ ಅಪಾರ: ಸಂಸದ ಬಿ.ವೈ ರಾಘವೇಂದ್ರ
Spread the love

ಸಾಗರ: ಜೈನ ಮತವು ಶಾಂತಿ, ಅಹಿಂಸೆ ಮತ್ತು ಸೌಹಾರ್ದತೆಯ ಸಂದೇಶವನ್ನು ಜಗತ್ತಿಗೆ ಸಾರಿದ ಶ್ರೇಷ್ಠ ದರ್ಶನವಾಗಿದ್ದು, ಅದರ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

img 20260430 wa00204800171859512131340 ಸಮಾಜದ ಅಭಿವೃದ್ಧಿಗೆ ಜೈನರ ಕೊಡುಗೆ ಅಪಾರ: ಸಂಸದ ಬಿ.ವೈ ರಾಘವೇಂದ್ರ

ಐತಿಹಾಸಿಕ ಬಿದರೂರಿನಲ್ಲಿ ನಡೆದ ವರ್ಧಮಾನ ಸ್ವಾಮಿಯ ಪಂಚಕಲ್ಯಾಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೈನ ಮತದ ಅಹಿಂಸಾ ತತ್ವವನ್ನು ಪಾಲಿಸಿದಾಗ ಮಾತ್ರ ಸಮಾಜದಲ್ಲಿ ನಿಜವಾದ ಶಾಂತಿ ಮತ್ತು ನೆಮ್ಮದಿ ಸ್ಥಾಪನೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇಂದಿನ ಆಧುನಿಕ ಯುಗದಲ್ಲಿ ಯುವಜನತೆ ಮೊಬೈಲ್ ಮತ್ತು ಡಿಜಿಟಲ್ ಸಾಧನಗಳಿಗೆ ಅತಿಯಾಗಿ ಆಕರ್ಷಿತರಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಸಂದರ್ಭಗಳಲ್ಲಿ ಜೈನ ಧರ್ಮದ ಆಧ್ಯಾತ್ಮಿಕ ತತ್ವಗಳು ಮನಸ್ಸಿಗೆ ಶಾಂತಿ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.

img 20260427 wa00134252095865983672531 ಸಮಾಜದ ಅಭಿವೃದ್ಧಿಗೆ ಜೈನರ ಕೊಡುಗೆ ಅಪಾರ: ಸಂಸದ ಬಿ.ವೈ ರಾಘವೇಂದ್ರ
img 20260110 wa00004205478733949648463 ಸಮಾಜದ ಅಭಿವೃದ್ಧಿಗೆ ಜೈನರ ಕೊಡುಗೆ ಅಪಾರ: ಸಂಸದ ಬಿ.ವೈ ರಾಘವೇಂದ್ರ

ದೇಶದ ಅಭಿವೃದ್ಧಿಯಲ್ಲಿ ಜೈನ ಮತದ ಕೊಡುಗೆ ಅಪಾರವಾಗಿದ್ದು, ಗುರುಗಳ ಮಾರ್ಗದರ್ಶನ ಇಂದಿನ ಸಮಾಜಕ್ಕೆ ದಾರಿದೀಪವಾಗುತ್ತದೆ. ಈ ಭಾಗದಲ್ಲಿ ಜಿನ ಮಂದಿರ ನಿರ್ಮಾಣವಾಗಿರುವುದು ಸಂತಸದ ಸಂಗತಿ. ಇಂತಹ ಧಾರ್ಮಿಕ ಕೇಂದ್ರಗಳು ಜನರಿಗೆ ಆಧ್ಯಾತ್ಮಿಕ ಶಾಂತಿ ಮತ್ತು ಮಾನಸಿಕ ನೆಮ್ಮದಿಯನ್ನು ಒದಗಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ್ದ ಸ್ವಾದಿ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಮಂದಿರಗಳ ನಿರ್ಮಾಣವು ಸಮಾಜದಲ್ಲಿ ಶಾಂತಿ ಮತ್ತು ಒಗ್ಗಟ್ಟನ್ನು ಹೆಚ್ಚಿಸುತ್ತದೆ. ಮನುಷ್ಯನು ಮನುಷ್ಯತ್ವವನ್ನು ಬೆಳೆಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸದ್ಗುಣಗಳನ್ನು ಅಳವಡಿಸಿಕೊಂಡು ಪರೋಪಕಾರದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಉಪದೇಶಿಸಿದರು.

image editor output image 1430871392 17775552231821922616958801419788 ಸಮಾಜದ ಅಭಿವೃದ್ಧಿಗೆ ಜೈನರ ಕೊಡುಗೆ ಅಪಾರ: ಸಂಸದ ಬಿ.ವೈ ರಾಘವೇಂದ್ರ

ವೇದಿಕೆಯಲ್ಲಿ ಟಿ.ಡಿ. ಮೇಘರಾಜ್, ರಾಜಶೇಖರ್ ಗಾಳಿಪುರ, ನಾಗರಾಜ್ ಬೊಬ್ಬಿಗೆ, ಲಕ್ಷ್ಮೀನಾರಾಯಣ, ದಿನೇಶ್ ಜೈನ್ (ಬಾಂಬೆ), ಶಶಿಕಲಾ ದಿನೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಶಾಂತರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Leave a Reply

Your email address will not be published. Required fields are marked *