ಹೊಸನಗರ: ಏಪ್ರಿಲ್ 5ನೇ ಭಾನುವಾ ನಗರ ದಿಂದ ಪ್ರಾರಂಭವಾಗಿ ಸಂಜೆ ಹೊಸನಗರದಲ್ಲಿ ವಾಸ್ತವ್ಯ ನಡೆಸಿ ಸೋಮವಾರ ಬೆಳಿಗ್ಗೆ ಹೊಸನಗರದಿಂದ ಪಾದಯಾತ್ರೆಯ ಮೂಲಕ ರಿಪ್ಪನ್ಪೇಟೆಯಲ್ಲಿ ಬಹಿರಂಗ ಸಭೆಯಲ್ಲಿ ಹೊಸನಗರ ಕ್ಷೇತ್ರ ಬೇಕು ಎಂಬ ಹೋರಾಟಕ್ಕೆ ಹೊಸನಗರ ಕೋಟೆಗಾರ್ ವಿದ್ಯಾವರ್ಧಕ ಸಂಘ ಸಂಪೂರ್ಣ ಬೆಂಬಲ ನೀಡುತ್ತೇವೆಂದು ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶಶಿಧರ್ ನಾಯ್ಕ ಅವರು ತಿಳಿಸಿದರು.

ಹೊಸನಗರದ ಸೀತಾರಾಮಚಂದ್ರ ಸಭಾಭವನದ ಆವರಣದಲ್ಲಿ ಹೊಸನಗರ ಕ್ಷೇತ್ರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಬೇಕು ಎಂದು ಕಲಗೋಡು ರತ್ನಾಕರ್ ಹಾಗೂ ಅನೇಕರು ಮನವಿಯ ಮೇರೆಗೆ ನಮ್ಮ ಕೋಟೆಗಾರ್ ವಿದ್ಯಾವರ್ಧಕ ಸಂಘ ಕೋಟೆಗಾರ್ ಮಹಿಳಾ ಸಂಘ ಹಾಗೂ ಕೋಟೆಗಾರ್ ಯುವಕ ಸಂಘದವರು ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಹೋರಾಟ ಸಮಿತಿಯ ಸದಸ್ಯರಾದ ಕಲಗೋಡು ರತ್ನಾಕರ್, ಎನ್.ಆರ್. ದೇವಾನಂದ್, ಹೋರಾಟ ಸಮಿತಿಯ ಸಂಚಾಲಕ ಚಿದಂಬರ, ಕೋಟೆಗಾರ್ ವಿದ್ಯಾವರ್ಧಕ ಸಂಘ ಪ್ರದಾನ ಕಾರ್ಯದರ್ಶಿ ಕೆ.ಜಿ. ನಾಗೇಶ್ ಹಾಗೂ ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಾವಿನಕೊಪ್ಪ ಸತೀಶ್, ಮಹಿಳಾ ಸಂಘದ ಅಧ್ಯಕ್ಷಿಣಿ ಶ್ರೀದೇವಿ ಹನುಮಂತ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
















Leave a Reply