ರಿಪ್ಪನ್ ಪೇಟೆ : ಪಟ್ಟಣದ ಓಂ ಶ್ರೀ ಮಾತೃಶ್ರೀ ಸೇವಾ ಸಂಸ್ಥೆ ಹಾಗೂ ಉಡುಪಿಯ ಆದರ್ಶ ಹಾಸ್ಪಿಟಲ್ ವತಿಯಿಂದ ಏಪ್ರಿಲ್ 5 ರಂದು ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಮೇರಿಮಾತ ವಿದ್ಯಾ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಉಡುಪಿ ಆದರ್ಶ ಹಾಸ್ಪಿಟಲ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂತೋಷ್ ಶೆಟ್ಟಿ ಹೇಳಿದರು.
ಪಟ್ಟಣದ ಓಂ ಶ್ರೀ ಮಾತೃಶ್ರೀ ಸೇವಾ ಸಂಸ್ಥೆಯ ನೂತನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅವಧೂತ ಶ್ರೀ ವಿನಯ ಗುರೂಜಿಯವರ ಮಾರ್ಗದರ್ಶನದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದು ಈ ಶಿಬಿರದಲ್ಲಿ 30ಕ್ಕೂ ಅಧಿಕ ವಿವಿಧ ವಿಭಾಗಗಳ ಹಿರಿಯ ವೈದ್ಯರುಗಳು ಸೇರಿದಂತೆ, 60ಕ್ಕೂ ಅಧಿಕ ಆರೋಗ್ಯ ಸಿಬ್ಬಂದಿಗಳು ಭಾಗವಹಿಸಲಿದ್ದು ಈ ಶಿಬಿರದಲ್ಲಿ ಹತ್ತು ದಿನಗಳ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತದೆ ಈ ಶಿಬಿರದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲಾ ವಿಭಾಗಗಳ ಭಾಗವಹಿಸುವ ವೈದ್ಯರುಗಳು ವೈದ್ಯಕೀಯ ರಂಗದಲ್ಲಿ ನುರಿತ ಹಾಗೂ ಹಿರಿಯ ವೈದ್ಯರಾಗಿದ್ದು ಸಮಾಜ ಸೇವೆಯ ಸದುದ್ದೇಶದಿಂದ ಈ ಶಿಬಿರವನ್ನು ಏರ್ಪಡಿಸಲಾಗಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಮಂಜುನಾಥ್ ಎಸ್ ಮಾತನಾಡಿ ಗ್ರಾಮೀಣ ಪ್ರದೇಶ ಜನರಿಗೆ ಉತ್ತಮ ಆರೋಗ್ಯವನ್ನು ನೀಡುವುದರ ಸಲುವಾಗಿ ಈ ಶಿಬಿರವನ್ನು ಏರ್ಪಡಿಸಿದ್ದು ಈ ಶಿಬಿರದ ಪ್ರಯೋಜನವನ್ನು ಎಲ್ಲಾ ಜನರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷೆ ಲೇಖನ ಜಿ ಮಾತನಾಡಿ ಅವಧೂತ ಶ್ರೀ ವಿನಯ್ ಗುರೂಜಿಯವರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ನಮ್ಮ ಎನ್ ಜಿ ಒ ಸಂಸ್ಥೆಯ ವತಿಯಿಂದ ಈ ಶಿಬಿರವನ್ನು ಏರ್ಪಡಿಸಲಾಗಿದೆ. ನಮ್ಮ ನೂತನ ಸಂಸ್ಥೆಯ ಮೂಲ ಉದ್ದೇಶ ಉತ್ತಮ ಆರೋಗ್ಯ ಮತ್ತು ಶಿಕ್ಷಣವನ್ನು ಗ್ರಾಮೀಣ ಪ್ರದೇಶದ ಜನತೆಗೆ ತಲುಪಿಸುವುದು, ಜನ ಸಾಮಾನ್ಯರು ಸಹ ಉತ್ತಮ ಆರೋಗ್ಯವನ್ನು ಹೊಂದಲಿ ಎನ್ನುವ ಸದಾಶಯದಿಂದ ನಾವು ಈ ಸಂಸ್ಥೆಯನ್ನು ಸ್ಥಾಪಿಸಿದ್ದೇವೆ.
ಈ ಶಿಬಿರದಲ್ಲಿ ವೈದ್ಯಕೀಯ ರಂಗದ ಎಲ್ಲಾ ವಿಭಾಗಗಳ ವೈದ್ಯರುಗಳು ಭಾಗವಹಿಸುತ್ತಿದ್ದು ಉಚಿತವಾಗಿ ತಪಾಸಣೆ ಮತ್ತು ಔಷಧಿಗಳ ವಿತರಣೆಯು ಸಹ ಈ ಶಿಬಿರದಲ್ಲಿ ಇರುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಹೇಮಾಂಬಿಕ, ಸಹ ಕಾರ್ಯ ದರ್ಶಿ ಪಿಯುಸ್ ಡಿಸೋಜಾ ಖಜಾಂಚಿ ಸಬಾಸ್ಟಿನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.


















Leave a Reply