ಕೋಡೂರು :ಅಂದರ್-ಬಹರ್ ಆಟಕ್ಕೆ ಬ್ರೇಕ್- ಪೊಲೀಸರ ದಾಳಿ,ಕಾನೂನು ಕ್ರಮ

Blue and Red Voter Education Banner 20260321 072457 0000 scaled ಕೋಡೂರು :ಅಂದರ್-ಬಹರ್ ಆಟಕ್ಕೆ ಬ್ರೇಕ್- ಪೊಲೀಸರ ದಾಳಿ,ಕಾನೂನು ಕ್ರಮ
Spread the love

ರಿಪ್ಪನ್ ಪೇಟೆ: ಟ್ಟಣದ ಸಮೀಪದ ಕೊಡೂರು ಗ್ರಾಮದ ಕಾಗೆಮರಡು ಬಳಿ ಅಂದರ್-ಬಹರ್ ಇಸ್ಪೀಟು ಜೂಜಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಗುರುವಾರ ಗಸ್ತು ತಿರುಗುತ್ತಿದ್ದ ವೇಳೆ, ಶಾಂತಪುರದ ಬಸ್ ನಿಲ್ದಾಣದ ಬಳಿ ಬಂದಾಗ ಕಾಗೆಮರಡು ಬಳಿ ಕೆಲವು ವ್ಯಕ್ತಿಗಳು ಅಕ್ರಮವಾಗಿ ಜೂಜಾಟದಲ್ಲಿ ತೊಡಗಿರುವುದು ಪೊಲೀಸರ ಗಮನಕ್ಕೆ ಬಂದಿದ್ದು, ತಕ್ಷಣ ಕ್ರಮ ಕೈಗೊಂಡ ಪೊಲೀಸ್ ಸಿಬ್ಬಂದಿಗಳಾದ ಉಮೇಶ್ ಹಾಗೂ ರಾಮಚಂದ್ರ ಅವರು ದಾಳಿ ನಡೆಸಿದರು.

ದಾಳಿಯ ವೇಳೆ ಜೂಜಾಟದಲ್ಲಿ ತೊಡಗಿದ್ದವರ ವಿರುದ್ಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಈ ಘಟನೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿರುವುದು ತೋರಿಸುತ್ತಿದೆ.

Leave a Reply

Your email address will not be published. Required fields are marked *