Vijay- Rashmika ಮದುವೆ: ಅತ್ತಿಗೆ ಬಗ್ಗೆ ಆನಂದ್‌ ದೇವರಕೊಂಡ ಪೋಸ್ಟ್

IMG 20260227 WA0006 1 Vijay- Rashmika ಮದುವೆ: ಅತ್ತಿಗೆ ಬಗ್ಗೆ ಆನಂದ್‌ ದೇವರಕೊಂಡ ಪೋಸ್ಟ್
Spread the love

ಟಾಲಿವುಡ್‌ ಅಂಗಳದಲ್ಲಿ ವಿರೋಷ್‌ ಮದುವೆ ಸಂಭ್ರಮ ಮುಗಿಲು ಮುಟ್ಟಿದೆ. ರಶ್ಮಿಕಾ-ವಿಜಯ್‌ ಮದುವೆಗೆ (ಫೆ.26) ಅಧಿಕೃತ ಮುದ್ರೆ ಬಿದ್ದಿದೆ. ಈ ಹಿನ್ನೆಲೆ ವಿಜಯ್‌ ಸಹೋದರ ಆನಂದ್‌ ದೇವರಕೊಂಡ ತನ್ನ ಅತ್ತಿಗೆ ರಶ್ಮಿಕಾ ಕುರಿತು ಪೋಸ್ಟ್‌ ಹಂಚಿಕೊಂಡಿದ್ದಾರೆ.

ವಿರೋಷ್‌ ಜೊತೆಗಿನ ಮದುವೆಯ ಸುಂದರ ಕ್ಷಣಗಳ ಫೋಟೋವನ್ನು ಆನಂದ್‌ ಇನ್ಸ್ಟಾಗ್ರಾಂನಲ್ಲಿ ಶೇರ್‌ ಮಾಡಿ, ನಾನು ಹೋದಲ್ಲೆಲ್ಲ ಹಲವಾರು ಬಾರಿ ಅಭಿಮಾನಿಗಳು ‘ಅತ್ತಿಗೆ ಹೇಗಿದ್ದಾರೆ’ ಎಂದು ಕಿರುಚುತ್ತಿದ್ದರು. ಆಗ ಅವರಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದು ನನಗೆ ಗೊತ್ತಾಗುತ್ತಿರಲಿಲ್ಲ. ಇಂದು ನನ್ನ ಅಣ್ಣ ಮದುವೆಯಾಗಿದ್ದಾನೆ. ಪಾಸಿಟಿವ್ ಮತ್ತು ಸಹಾನುಭೂತಿಯ ವ್ಯಕ್ತಿಯನ್ನು ಅತ್ತಿಗೆಯಾಗಿ ನಾನು ಪಡೆದುಕೊಂಡಿದ್ದೇನೆ. ತಮ್ಮ ಜೀವನವಿಡಿ ಇವರಿಬ್ಬರು ಹೀಗೆಯೇ ನಗು ನಗುತ್ತಾ ಇರಲಿ. ನಗುತ್ತಲೇ ಜೀವನ ಪರ್ಯಂತ ಜೊತೆಯಾಗಿರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಆನಂದ್‌ ಜೊತೆ ರಶ್ಮಿಕಾ ಅವರಿಗೆ ಉತ್ತಮ ಒಡನಾಟವಿದೆ. ಈ ಹಿಂದೆ ಹಲವು ಕಾರ್ಯಕ್ರಮಗಳಲ್ಲಿ ಆನಂದ್‌ರನ್ನು ತನ್ನ ಸಹೋದರ ಎಂದೇ ನಟಿ ಹೇಳಿದ್ದರು. ಆನಂದ್‌ ಹೊಸ ಸಿನಿಮಾಗಳಿಗೆ ರಶ್ಮಿಕಾ ಆಗಮಿಸಿ ಕ್ಲ್ಯಾಪ್‌ ಮಾಡಿ ಚಿತ್ರ ಸಕ್ಸಸ್‌ ಕಾಣಲಿ ಎಂದು ಹೇಳಿ ಹೋಗುತ್ತಿದ್ದರು. ‌

Leave a Reply

Your email address will not be published. Required fields are marked *