ಅಧಿಕಾರಿಯ ವಿರುದ್ಧ ರೈತನ ವಿನೂತನ ಹೋರಾಟ – ಜೈಲಿನೆದುರು ವಿಭಿನ್ನ ದೃಶ್ಯ

ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 ಅಧಿಕಾರಿಯ ವಿರುದ್ಧ ರೈತನ ವಿನೂತನ ಹೋರಾಟ – ಜೈಲಿನೆದುರು ವಿಭಿನ್ನ ದೃಶ್ಯ
Spread the love

ರೈತ ವಿರೋಧಿ ನಿಲುವು ತಳೆದ ಅಧಿಕಾರಿಗೆ ವ್ಯಂಗ್ಯ | ಸೋಪು, ಸೊಳ್ಳೆ ಬತ್ತಿ, ತಿನ್ನಲು ಬ್ರೆಡ್ ತಂದ ರೈತ

A farmer’s unique fight against an officer – a different scene in front of the jail

ಶಿವಮೊಗ್ಗ : ಲಂಚ ಪಡೆಯುವಾಗ ಸಿಕ್ಕಿ ಬಿದ್ದು ಜೈಲು ಸೇರಿರುವ ಭೂಸ್ವಾಧೀನ ಅಧಿಕಾರಿಯೋರ್ವರಿಗೆ ಅವರಿಂದ ಅನ್ಯಾಯಕ್ಕೆ ಒಳಗಾಗಿ ರೈತರೋರ್ವರು ಜೈಲಿನ ಎದುರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ಘಟನೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಬಳಿ ನಡೆದಿದೆ.

image editor output image 1606768510 17714272361548866919308505149365 ಅಧಿಕಾರಿಯ ವಿರುದ್ಧ ರೈತನ ವಿನೂತನ ಹೋರಾಟ – ಜೈಲಿನೆದುರು ವಿಭಿನ್ನ ದೃಶ್ಯ

ಭೂ ಸ್ವಾಧೀನ ಅಧಿಕಾರಿ ಸಿದ್ದಲಿಂಗರೆಡ್ಡಿಯವರು ಇತ್ತೀಚೆಗೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಸೇರಿದ್ದರು. ಇವರು ಅಧಿಕಾರದಲ್ಲಿ ಇರುವ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡುವ ಸಂದರ್ಭದಲ್ಲಿ ವಿಶುಕುಮಾರ್‌ಎಂಬ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ನೋಟೀಸ್ ನೀಡಿದ್ದರು. ಈ ಜಮೀನಿನಲ್ಲಿ ಇದ್ದ ಶ್ರೀಗಂಧದ ಮರಕ್ಕೆ ಕೇವಲ 420 ರು. ನಿಗದಿಪಡಿಸಿದ್ದರು. ಇದರ ವಿರುದ್ಧ ರೈತನೆ ಮನವಿ ಮತ್ತು ಪ್ರತಿಭಟನೆಗೆ ಬೆಲೆ ನೀಡಿರಲಿಲ್ಲ. ಇದರಿಂದರೈತ ತೀವ್ರವಾಗಿ ನೊಂದಿದ್ದರು.

img 20260216 wa00158116272466678337127 ಅಧಿಕಾರಿಯ ವಿರುದ್ಧ ರೈತನ ವಿನೂತನ ಹೋರಾಟ – ಜೈಲಿನೆದುರು ವಿಭಿನ್ನ ದೃಶ್ಯ
ರಾಷ್ಟ್ರೀಯ ಹೆದ್ದಾರಿ 206 ವಿಶೇಷ ಭೂ ಸ್ವಾಧೀನಾಧಿಕಾರಿ ಸಿದ್ದಲಿಂಗ ರೆಡ್ಡಿ ಹಾಗೂ ಹೊಳಲೂರು ನಾಡಕಚೇರಿ ಸಹಾಯಕ ರಾಜೇಶ್ ಲೋಕಾಯುಕ್ತರಿಗೆ ಸಿಕ್ಕಿಬಿದ್ದವರು.

‘ಈ ನಡುವೆ ಸಿದ್ದಲಿಂಗ ರೆಡ್ಡಿ ಲಂಚ ಸ್ವೀಕರಿಸುವಾಗ ಜೈಲು ಪಾಲಾದ ಘಟನೆ ನಡೆದಿತ್ತು. ಇವರ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸುವ ಮೂಲಕ ಅವರ ಮಾನ ಹರಾಜುಹಾಕಲು ನಿರ್ಧರಿಸಿದ ರೈತ ವಿಶುಕುಮಾರ್‌ಅವರು ಸೊಳ್ಳೆ ಬತ್ತಿ, ಬಾಳೆ ಹಣ್ಣು ಬ್ರೆಡ್, ಮೈಸೂರು ಸ್ಯಾಂಡಲ್ ಸೋಪ್ ಇನ್ನಿತರ ವಸ್ತುಗಳೊಂದಿಗೆ ಜೈಲಿಗೆ ಆಗಮಿಸಿದರು. ಬಳಿಕ ಜೈಲಿನ ಎದುರು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಸರ್ಕಾರಕ್ಕೆ ಹಣ ಉಳಿಸುವ ಕಾರಣಕ್ಕೆ ರೈತರಿಗೆ ಕಡಿಮೆ ಹಣ ನೀಡಿದ್ದಾರೆ ಎಂದು ವ್ಯಂಗ್ಯವಾಡಿದ ವಿಶುಕುಮಾ‌ರ್, ಇಂತಹ ಒಳ್ಳೆಯ ಅಧಿಕಾರಿ ಇನ್ನಷ್ಟು ಕಾಲ ಆರೋಗ್ಯವಾಗಿ ಸರ್ಕಾರದ ಮತ್ತು ಜನರ ಸೇವೆ ಮಾಡಬೇಕಾದ ಅಗತ್ಯವಿದೆ. ಹೀಗಾಗಿ ಅವರು ಆರೋಗ್ಯವಾಗಿರಲು ಸೋಪು, ಬ್ರೆಡ್, ಸೊಳ್ಳೆ ಕಡಿತದಿಂದ ಪಾರಾಗಲು ಸೊಳ್ಳೆ ಬತ್ತಿ ಇನ್ನಿತರ ವಸ್ತುಗಳನ್ನು ಕೊಡಲು ಬಂದಿದ್ದೇನೆ. ಇಂತಹ ಅಧಿಕಾರಿಗಳು ಈ ದೇಶಕ್ಕೆ ಬೇಕು, ಅವರು ಆರೋಗ್ಯವಾಗಿರಲಿ ಎಂದು ಹಾರೈಸುವುದಕ್ಕಾಗಿ ಬಂದಿದ್ದೇನೆ ಎಂದು ವ್ಯಂಗ್ಯ ಭರಿತ ಮಾತುಗಳನ್ನು ಆಡುವ ಮೂಲಕ ಪ್ರತಿಭಟನೆ ಮಾಡಿದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

#shivamogga


Spread the love

Leave a Reply

Your email address will not be published. Required fields are marked *