ದೂರ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ವಿಶಿಷ್ಟ ಸೇವೆ, ಸಂಶೋಧನೆ ಮತ್ತು ನಾವೀನ್ಯತೆ ಗುರುತಿಸಿ ಪುರಸ್ಕಾರ
ಹುಂಚ :ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ದಿ ಇಂಡಿಯನ್ ಫೋರಂ ಫಾರ್ ಸೋಶಿಯಲ್ ಲೀಡರ್ಸ್ ಅಂಡ್ ಅಚೀವರ್ಸ್ (The Indian Forum for Social Leaders and Achievers), ಚೆನ್ನೈ ಸಂಸ್ಥೆಯು ನೀಡುವ 2026ನೇ ಸಾಲಿನ ರಾಷ್ಟ್ರೀಯ ಸ್ವಾಮಿ ವಿವೇಕಾನಂದ ಸಂಶೋಧನೆ ಮತ್ತು ನಾವೀನ್ಯತೆ ಶ್ರೇಷ್ಠತಾ ಪ್ರಶಸ್ತಿ ಅನ್ನು ಅಭಿಷೇಕ್ ಕೆ ಅವರಿಗೆ ನೀಡಿ ಪುರಸ್ಕರಿಸಿದೆ.

ಹೊಸನಗರ ತಾಲೂಕಿನ ಹುಂಚ ಗ್ರಾಮದ ನಿವಾಸಿ ಅಭಿಷೇಕ್ ಕೆ ಅವರು ರಿಯೋಮ್ ಎಜುಕೇಶನ್ ಅಕಾಡೆಮಿಯ ಮುಖ್ಯಸ್ಥರಾಗಿದ್ದಾರೆ. ದೂರ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ವಿಶಿಷ್ಟ ಸೇವೆ, ಸಂಶೋಧನೆ ಮತ್ತು ನಾವೀನ್ಯತೆಯ ಮೂಲಕ ಸಮಾಜಮುಖಿ ಶಿಕ್ಷಣವನ್ನು ಬಲಪಡಿಸಿರುವುದನ್ನು ಗುರುತಿಸಿ ಅವರಿಗೆ ಈ ಗೌರವ ಪ್ರಾಪ್ತವಾಗಿದೆ.
ಸ್ವಾಮಿ ವಿವೇಕಾನಂದರ ಆದರ್ಶಗಳು, ಚಿಂತನೆಗಳು ಹಾಗೂ ಯುವಶಕ್ತಿಗೆ ಪ್ರೇರಣೆಯಾಗುವ ಕಾರ್ಯಗಳನ್ನು ಮುಂದುವರೆಸುವ ಸಾಧಕರನ್ನು ಗುರುತಿಸುವ ಉದ್ದೇಶದಿಂದ ಈ ರಾಷ್ಟ್ರೀಯ ಪ್ರೇರಣಾ ಪ್ರಶಸ್ತಿಯನ್ನು ಪ್ರತಿವರ್ಷ ನೀಡಲಾಗುತ್ತದೆ. 2026ನೇ ಸಾಲಿನ “Swami Vivekananda National Inspiration Award” ಅನ್ನು ಅಭಿಷೇಕ್ ಕೆ ಅವರಿಗೆ ನೀಡುವ ಮೂಲಕ, ಅವರ ಶೈಕ್ಷಣಿಕ ನಾಯಕತ್ವ ಹಾಗೂ ಸಾಮಾಜಿಕ ಬದ್ಧತೆಯನ್ನು ಪ್ರಶಸ್ತಿ ಸಮಿತಿ ಗುರುತಿಸಿದೆ.
ದೂರ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ವಿಶಿಷ್ಟ ಸೇವೆ, ಸಂಶೋಧನೆ ಮತ್ತು ನಾವೀನ್ಯತೆಯ ಮೂಲಕ ಸಮಾಜಮುಖಿ ಶಿಕ್ಷಣವನ್ನು ಬಲಪಡಿಸಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಅಭಿಷೇಕ್ ರವರಿಗೆ ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಯವರು ಅಭಿನಂದಿಸಿದ್ದಾರೆ.








Leave a Reply