ಮುಗ್ಧ ಮಾತಿನ ಮೂಲಕ `ಬಿಗ್ ಬಾಸ್’ ಶೋನಿಂದ ಮನಗೆದ್ದ ಮಲ್ಲಮ್ಮಗೆ ಬಿಗ್ ಚಾನ್ಸ್ವೊಂದು ಸಿಕ್ಕಿದೆ. ಸಿನಿಮಾದಲ್ಲಿ ನಟಿಸಲು ಮಲ್ಲಮ್ಮಗೆ ಅವಕಾಶ ಸಿಕ್ಕಿದೆ.

`ವಿನಾಶ ಕಾಲೆ’ ಸಿನಿಮಾದಲ್ಲಿ ನಟಿಸಲು ಮಲ್ಲಮ್ಮಗೆ ಚಾನ್ಸ್ ಸಿಕ್ಕಿದೆ. ತಾಯಿ ಪಾತ್ರಕ್ಕೆ ಬಣ್ಣ ಹಚ್ಚಲು ಬುಲಾವ್ ಬಂದಿದೆ. ಪಾತ್ರಕ್ಕಿರುವ ಮಹತ್ವ ನೋಡಿ ಖುಷಿಯಿಂದಲೇ ಚಿತ್ರದಲ್ಲಿ ನಟಿಸಲು ಮಲ್ಲಮ್ಮ ಒಪ್ಪಿಕೊಂಡಿದ್ದಾರೆ. ಇದಲ್ಲದೇ 2-3 ಸೀರಿಯಲ್‌ನಲ್ಲಿ ನಟಿಸಲು ಅವರಿಗೆ ಚಾನ್ಸ್ ಸಿಕ್ಕಿದೆಯಂತೆ. ಈ ಬಗ್ಗೆ ಯೋಚಿಸಿ ಮುಂದುವರೆಯುತ್ತೇನೆ ಎಂದು ಮಾತನಾಡಿದ್ದಾರೆ.
ಮಾತಿನ ಮಲ್ಲಿ ಮಲ್ಲಮ್ಮ `ಬಿಗ್ ಬಾಸ್ ಕನ್ನಡ 12’ರಲ್ಲಿ ಸ್ಪರ್ಧಿಯಾಗಿ ರಂಜಿಸಿದ್ದರು. ಇದೀಗ ಅವರ ಜನಪ್ರಿಯತೆ ಹೆಚ್ಚಾಗಿದೆ.














Leave a Reply