ಶಿವಮೊಗ್ಗ|ಚೆಸ್ ಆಡುತ್ತಿದ್ದಾಗ ಕುಸಿದು ಬಿದ್ದ 16 ವರ್ಷದ SSLC ವಿದ್ಯಾರ್ಥಿ ಸಾವು

Addaheading 20260810 220954 0000 ಶಿವಮೊಗ್ಗ|ಚೆಸ್ ಆಡುತ್ತಿದ್ದಾಗ ಕುಸಿದು ಬಿದ್ದ 16 ವರ್ಷದ SSLC ವಿದ್ಯಾರ್ಥಿ ಸಾವು
Spread the love

ಶಿವಮೊಗ್ಗ: ಶಾಲೆಯಲ್ಲಿ ಚೆಸ್ ಆಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ 16 ವರ್ಷದ SSLC ವಿದ್ಯಾರ್ಥಿಯೊಬ್ಬರು ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿರುವ ದುರ್ಘಟನೆ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
   ಮೃತ ವಿದ್ಯಾರ್ಥಿಯನ್ನು ಶಿಕಾರಿಪುರ ತಾಲೂಕಿನ ಹಳೇ ಮುಗಳಗೇರಿ ಗ್ರಾಮದ ಜಾಕಣಚಾರಿ ಅವರ ಪುತ್ರ ವಿನಯ್ (16) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ಪ್ರಸ್ತುತ ತಮ್ಮ ಅಜ್ಜ-ಅಜ್ಜಿಯೊಂದಿಗೆ ತಮ್ಮಡಿಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದು, ಅಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ SSLC ವ್ಯಾಸಂಗ ಮಾಡುತ್ತಿದ್ದನು.
   ಸೋಮವಾರ ಸಂಜೆ ಸುಮಾರು 3:45ರ ವೇಳೆಗೆ ಶಾಲೆಯಲ್ಲಿ ಚೆಸ್ ಆಡುತ್ತಿದ್ದ ಸಂದರ್ಭದಲ್ಲಿ ವಿನಯ್ ಏಕಾಏಕಿ ಕುಸಿದು ಬಿದ್ದಿದ್ದಾನೆ. ತಕ್ಷಣ ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಯನ್ನು ಆಯನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವ ವೇಳೆ ದಾರಿ ಮಧ್ಯೆಯೇ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
   ಘಟನೆ ಕುರಿತು ಕುಂಸಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ವಿದ್ಯಾರ್ಥಿಯ ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

file 000000003f5c8208a0b120fec3430d9d4794413935008640144 ಶಿವಮೊಗ್ಗ|ಚೆಸ್ ಆಡುತ್ತಿದ್ದಾಗ ಕುಸಿದು ಬಿದ್ದ 16 ವರ್ಷದ SSLC ವಿದ್ಯಾರ್ಥಿ ಸಾವು

Leave a Reply

Your email address will not be published. Required fields are marked *