ನಗರ : ನಿಟ್ಟೂರು ಸಮೀಪದ ನಾಗೋಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಿಕ್ಷಕಿ ಶ್ರೀಮತಿ ಕುಸುಮಾಕ್ಷಿ ಕೆ. ಹೆಗಡೆ ಅವರಿಗೆ ಬೀಳ್ಕೊಡುಗೆ ಹಾಗೂ ಸೇವಾ ಅಭಿನಂದನಾ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ಅವರು ಮಾತನಾಡಿ, ಶಿಕ್ಷಕ ವೃತ್ತಿಯ ಮಹತ್ವ ಹಾಗೂ ಶಿಕ್ಷಕ-ವಿದ್ಯಾರ್ಥಿಗಳ ಬಾಂಧವ್ಯದ ಕುರಿತು ತಿಳಿಸಿ ನಿವೃತ್ತ ಶಿಕ್ಷಕಿಗೆ ಶುಭಹಾರೈಸಿದರು. ಜೊತೆಗೆ ಶಾಲೆಯ ಶಿಕ್ಷಕರ ಕೊರತೆಯನ್ನು ಮುಂದಿನ ದಿನಗಳಲ್ಲಿ ನೀಗಿಸುವುದಾಗಿ ಭರವಸೆ ನೀಡಿದರು.
ಕುಸುಮಾಕ್ಷಿ ಹೆಗಡೆಯವರು ತಮ್ಮ 40 ವರ್ಷ 9 ತಿಂಗಳ ಸೇವಾ ಅವಧಿಯ ಅನುಭವವನ್ನು ಹಂಚಿಕೊಂಡ ಅವರು, ಸಹೋದ್ಯೋಗಿಗಳು ಹಾಗೂ ಪೋಷಕರ ಸಹಕಾರವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕುಸುಮಾಕ್ಷಿ ಹೆಗಡೆ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಸಹಶಿಕ್ಷಕಿ ಸವಿತಾ ಅವರು ಸ್ವಾಗತಿಸಿ, ಕುಸುಮಾಕ್ಷಿ ಹೆಗಡೆ ಅವರ ಸೇವೆಯನ್ನು ಪರಿಚಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ವಿನಯ್ ಕುಮಾರ್ ವಹಿಸಿದ್ದರು.

ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ಹೊಸನಗರ ಶಾಖೆಯ ಅಧ್ಯಕ್ಷರಾದ ಸುರೇಶ್, ಉಪಾಧ್ಯಕ್ಷರಾದ ಶಿವಮೂರ್ತಿ ಎಂ.ಎಸ್ ಹಾಗೂ ಸಹಕಾರ್ಯದರ್ಶಿ ಅರವಿಂದ್, ಸರ್ಕಾರಿ ನೌಕರಿ ಸಂಘದ ಪದಾಧಿಕಾರಿಗಳಾದ ಬಸವಣ್ಣಪ್ಪ , ಶ್ರೀಮತಿ ಲಿಲ್ಲಿ ಡಿಸೋಜ, ಶ್ರೀಮತಿ ಲತಾ, ಜೆ.ಕೆ. ರಾಘವೇಂದ್ರ, ತಾಲೂಕು ಪ್ರಭಾರ ದೈಹಿಕ ಪರಿವೀಕ್ಷಕರಾದ ವಿನಯ್ ಹೆಗಡೆ, ನಿವೃತ್ತ ಶಿಕ್ಷಕರಾದ ಸತೀಶ್,ಮಹಾಬಲಗಿರಿ, ಆಶ್ರಿತ ಹಾಗೂ ಕಾರ್ಯಕ್ರಮದಲ್ಲಿ ವಿವಿಧ ಸಂಘಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ಮಣಿಕಂಠ ಡಿ. ಎಸ್, ನಿಟ್ಟೂರು









Leave a Reply