ಐಸಿಎಸ್ಇ ಪರೀಕ್ಷೆಯಲ್ಲಿ ಕೋಣಂದೂರು NRS ಗೆ ಶೇ.100 ಫಲಿತಾಂಶ

Blue and Red Voter Education Banner 20260501 093410 0000 scaled ಐಸಿಎಸ್ಇ ಪರೀಕ್ಷೆಯಲ್ಲಿ ಕೋಣಂದೂರು NRS ಗೆ ಶೇ.100 ಫಲಿತಾಂಶ
Spread the love

ಕೋಣಂದೂರು: ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಚಾಪು ಮೂಡಿಸಿರುವ  ಕೋಣಂದೂರಿನ National Residential School (NRS) ಮತ್ತೊಮ್ಮೆ ಅದ್ಭುತ ಸಾಧನೆ ಮಾಡುವ ಮೂಲಕ ಹೆಮ್ಮೆ ಹೆಚ್ಚಿಸಿದೆ. ಕೌನ್ಸಿಲ್ ಆಫ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ ಪ್ರಕಟಿಸಿದ ಐಸಿಎಸ್ಇ 10ನೇ ತರಗತಿ ಫಲಿತಾಂಶದಲ್ಲಿ ಶಾಲೆ ಶೇ.100 ಫಲಿತಾಂಶ ದಾಖಲಿಸಿದೆ.

img 20260430 wa0020110104511021432754 ಐಸಿಎಸ್ಇ ಪರೀಕ್ಷೆಯಲ್ಲಿ ಕೋಣಂದೂರು NRS ಗೆ ಶೇ.100 ಫಲಿತಾಂಶ

ಒಟ್ಟು 77 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿರುವುದು ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಇವರಲ್ಲಿ 28 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 45 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್, 3 ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸ್ ಹಾಗೂ 1 ವಿದ್ಯಾರ್ಥಿ ಪಾಸ್ ಕ್ಲಾಸ್‌ನಲ್ಲಿ ತೇರ್ಗಡೆಯಾಗಿದ್ದಾರೆ.
ಶಾಲೆಯ ಮೇರು ಸಾಧಕರಾಗಿ ಅದಿತಿ ಕೆ.ಎಸ್ 96 ಶೇಕಡಾ ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸನ್ನಿಧಿ 95.2 ಶೇಕಡಾ ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಅದಿತಿ ಪಿ. ಶೆಟ್ಟಿ 94 ಶೇಕಡಾ ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಮತ್ತಷ್ಟು ಎತ್ತಿದ್ದಾರೆ.

img 20260110 wa00005670220222633369641 ಐಸಿಎಸ್ಇ ಪರೀಕ್ಷೆಯಲ್ಲಿ ಕೋಣಂದೂರು NRS ಗೆ ಶೇ.100 ಫಲಿತಾಂಶ

ವಿಶೇಷವೆಂದರೆ, ಶಾಲೆಯ ಬೆಳ್ಳಿಹಬ್ಬದ ಸಂಭ್ರಮದ ಈ ವಿಶೇಷ ವರ್ಷದಲ್ಲಿ ಮತ್ತೊಮ್ಮೆ ಶತಪ್ರತಿಶತ ಫಲಿತಾಂಶ ಸಾಧಿಸಿರುವುದು ಶಾಲಾ ಕುಟುಂಬಕ್ಕೆ ಡಬಲ್ ಸಂಭ್ರಮ ತಂದಿದೆ. ಇದು ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಸಮರ್ಪಿತ ಬೋಧನೆ ಹಾಗೂ ಪೋಷಕರ ಸಹಕಾರದ ಫಲವೆಂದು ಹೇಳಬಹುದು.
ಶಾಲೆಯ ಪ್ರಾಂಶುಪಾಲರಾದ ಕೆ.ಎಸ್. ವಾಸುದೇವ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲೂ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದರು.

ಗುಣಮಟ್ಟದ ಶಿಕ್ಷಣ, ಶಿಸ್ತುಬದ್ಧ ವಾತಾವರಣ ಹಾಗೂ ನಿರಂತರ ಶೈಕ್ಷಣಿಕ ಮಾರ್ಗದರ್ಶನದಿಂದ ಕೋಣಂದೂರು NRS ಗ್ರಾಮೀಣ ಭಾಗದಲ್ಲಿಯೇ ಮಾದರಿ ಶಿಕ್ಷಣ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

Leave a Reply

Your email address will not be published. Required fields are marked *