ಅಕ್ಟೋಬರ್ 18ರಂದು ಹೊಸನಗರದಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಮಾಸಿಕ ಸಭೆ

Addaheading 20261012 193239 0000 ಅಕ್ಟೋಬರ್ 18ರಂದು ಹೊಸನಗರದಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಮಾಸಿಕ ಸಭೆ
Spread the love

ಹೊಸನಗರ: ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಮಾಸಿಕ ಸಭೆಯು ಅಕ್ಟೋಬರ್ 18ರ ಭಾನುವಾರ ಹೊಸನಗರದ ಗಾಯತ್ರಿ ಮಂದಿರದಲ್ಲಿ ನಡೆಯಲಿದೆ. ಹೊಸನಗರ ತಾಲೂಕು ಹಾಗೂ ಕೋಣಂದೂರು ವಿಭಾಗದ ಔಷಧ ವ್ಯಾಪಾರಿಗಳ ಸಂಘದವರು ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷರು ಹಾಗೂ ರಾಮಕೃಷ್ಣ ಮೆಡಿಕಲ್ ಶಾಪ್ ಮಾಲೀಕರಾದ ಎನ್. ದತ್ತಾತ್ರೇಯ ಉಡುಪ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಮ್ಯಾನೇಜಿಂಗ್ ಕಮಿಟಿ ಸಭೆ ಹಾಗೂ ನಿಗದಿತ ಕಾರ್ಯಸೂಚಿಯಂತೆ ಮಾಸಿಕ ಸಭೆ ನಡೆಯಲಿದೆ. ಬಳಿಕ ಮಧ್ಯಾಹ್ನ 12ರಿಂದ 1 ಗಂಟೆಯವರೆಗೆ ಹೊಸನಗರ ತಾಲೂಕು ಮತ್ತು ಕೋಣಂದೂರು ವಿಭಾಗದ ಔಷಧ ವ್ಯಾಪಾರಿಗಳಿಗಾಗಿ ಚಿಂತನ-ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಂಗವಾಗಿ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಹಿರಿಯರು ಹಾಗೂ ನೂತನ ಪತ್ರಕರ್ತರ ಸಂಘದ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು.

ಸಭೆಗೆ ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು, ಹೊಸನಗರ ತಾಲೂಕು ಮತ್ತು ಕೋಣಂದೂರು ವಿಭಾಗದ ಔಷಧ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎನ್. ದತ್ತಾತ್ರೇಯ ಉಡುಪ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!