ರಸ್ತೆ ಅಪಘಾತ :ಅತಿವೇಗದ ವಾಹನಕ್ಕೆ ಗೋವುಗಳು ಬಲಿ; ಎರಡು ಗೋವುಗಳಿಗೆ ಗಾಯ

Addaheading 20261001 103646 0000 ರಸ್ತೆ ಅಪಘಾತ :ಅತಿವೇಗದ ವಾಹನಕ್ಕೆ ಗೋವುಗಳು ಬಲಿ; ಎರಡು ಗೋವುಗಳಿಗೆ ಗಾಯ
Spread the love

ರಿಪ್ಪನ್‌ಪೇಟೆ: ಬೆಳಗಿನ ಜಾವ ಸುಮಾರು 4.30ರ ವೇಳೆಯಲ್ಲಿ ಅತಿವೇಗವಾಗಿ ಸಂಚರಿಸುತ್ತಿದ್ದ ವಾಹನವೊಂದು ಗೋವುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಗೋವುಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೆರಡು ಗೋವುಗಳು ಗಾಯಗೊಂಡಿರುವ ಘಟನೆ ಗುರುವಾರ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಎದುರು ನಡೆದಿದೆ.
   ಅಪಘಾತಕ್ಕೆ ಕಾರಣವಾದ ವಾಹನವು ಕ್ಯಾಂಟರ್ ವಾಹನ ಆಗಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದು , ವಾಹನದ ಬಗ್ಗೆ ಖಚಿತ ಮಾಹಿತಿ ಈ ತನಕ ಲಭ್ಯವಾಗಿಲ್ಲ.

   ಅಪಘಾತ ಗಮನಕ್ಕೆ ಬಂದ ಕೂಡಲೇ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಗಾಯಗೊಂಡಿದ್ದ ಎರಡು ಗೋವುಗಳಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಅವುಗಳನ್ನು ಸಂತೈಸುವ ಕಾರ್ಯ ನಡೆಸಿ, ಮೃತ ಗೋವುಗಳ ಅಂತ್ಯಸಂಸ್ಕಾರ ನೆರವೇರಿಸಿದರು.

  ಘಟನೆಗೆ ಸಂಬಂಧಿಸಿದಂತೆ ರಿಪ್ಪನ್‌ಪೇಟೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

file 000000003f5c8208a0b120fec3430d9d8967595370170191577 ರಸ್ತೆ ಅಪಘಾತ :ಅತಿವೇಗದ ವಾಹನಕ್ಕೆ ಗೋವುಗಳು ಬಲಿ; ಎರಡು ಗೋವುಗಳಿಗೆ ಗಾಯ

Leave a Reply

Your email address will not be published. Required fields are marked *

error: Content is protected !!