ಹೊಸನಗರ: ನಮ್ಮ ಮನೆಯ ಸುತ್ತಮುತ್ತಲಿನ ಪರಿಸರ ಹಾಗೂ ಮನೆಯ ಮುಂಭಾಗದ ರಸ್ತೆಗಳನ್ನು ನಾವೇ ಸ್ವಚ್ಛವಾಗಿಟ್ಟುಕೊಂಡರೆ ರೋಗಗಳ ಹರಡುವಿಕೆಯನ್ನು ತಡೆಯಬಹುದು ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಾ ಸುರೇಶ್ ಹೇಳಿದರು.
ಬಿಜೆಪಿ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಮಹಿಳಾ ಮೋರ್ಚಾ ವತಿಯಿಂದ ಹೊಸನಗರದ ದುರ್ಗಾಂಬ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿದ ಬಳಿಕ ಅವರು ಮಾತನಾಡಿದರು.
ಪೌರ ನೌಕರರೂ ನಮ್ಮಂತೆಯೇ ಮನುಷ್ಯರಾಗಿದ್ದು, ಅವರಿಗೆ ಅನಗತ್ಯ ಕೆಲಸದ ಹೊರೆ ನೀಡದೆ ಪ್ರತಿಯೊಬ್ಬರೂ ತಮ್ಮ ಮನೆಯ ಕಸವನ್ನು ತಾವೇ ನಿರ್ವಹಿಸಬೇಕು. ಪರಿಸರ ಸ್ವಚ್ಛವಾಗಿದ್ದರೆ ಊರು ಕೂಡ ಸ್ವಚ್ಛವಾಗಿರುತ್ತದೆ ಎಂದು ಹೇಳಿದರು.
ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬ ಭಕ್ತರೂ ಒಂದು ಕಸದ ತುಂಡನ್ನಾದರೂ ತೆಗೆದು ಕಸದ ಬುಟ್ಟಿಗೆ ಹಾಕುವ ಅಭ್ಯಾಸ ಬೆಳೆಸಿಕೊಂಡರೆ ದೇವಾಲಯದ ಸೌಂದರ್ಯ ಹಾಗೂ ಪರಿಸರದ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಗುಣ ಅಶೋಕ್, ಮಾಲಾ ನಾಗರಾಜ್, ರುಕ್ಮೀಣಿ ರಾಜು, ಚಿಕ್ಕನಕೊಪ್ಪ ಶ್ರೀಧರ್, ಸತ್ಯನಾರಾಯಣ, ಕಾವೇರಿ ವಿಜಯಕುಮಾರ್, ಎ.ವಿ. ಮಲ್ಲಿಕಾರ್ಜುನ, ಕೃಷ್ಣವೇಣಿ, ಕಮಲಮ್ಮ, ಗಾಯತ್ರಿ ನಾಗರಾಜ್, ಸುಶೀಲಮ್ಮ, ಭಾರತಿ, ಸುಧೀರ್, ರಾಘವೇಂದ್ರ, ಶ್ರೀಪತಿರಾವ್, ಮಂಜುನಾಥ್ ಸಂಜೀವ ಸೇರಿದಂತೆ ಹಲವರು ಉಪಸ್ಥಿತರಿದ್ದರು.
















Leave a Reply