ಹೊಸನಗರ: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪರಿಸರ ಪ್ರೇಮಿ ಪೊಲೀಸ್ ಸಿಬ್ಬಂದಿ ಹಾಲೇಶಪ್ಪ ಅವರು ಹೊಸನಗರ ತಾಲ್ಲೂಕಿನಲ್ಲಿ ತಮ್ಮ 125ನೇ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿ, ಪೂರೈಸಿದ್ದಾರೆ.
ಹೊಸನಗರ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ರಕ್ತದಾನ ಶಿಬಿರದ ಸಂದರ್ಭದಲ್ಲಿ, ಹೊಸನಗರದ ಪ್ರತಿಷ್ಠಿತ ಸಂಘಟನೆಗಳಾದ ಜೆಸಿಎಂ ರೋಡ್ ಗೆಳೆಯರ ಬಳಗ ಹಾಗೂ ಜೆಸಿಐ ಡೈಮಂಡ್ ಹೊಸನಗರ ಇವರ ಸಂಯುಕ್ತ ಆಶ್ರಯದಲ್ಲಿ ಹಾಲೇಶಪ್ಪ ಅವರನ್ನು ಸನ್ಮಾನಿಸಲಾಯಿತು.
ಬಡವರು ಹಾಗೂ ಅಗತ್ಯವಿರುವವರಿಗೆ ಅನುಕೂಲವಾಗುವ ಉದ್ದೇಶದಿಂದ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿರುವ ಅವರ ಸಮಾಜಸೇವೆಯನ್ನು ಸಂಘಟನೆಗಳ ಪದಾಧಿಕಾರಿಗಳು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಜೆಸಿಐ ಡೈಮಂಡ್ ಅಧ್ಯಕ್ಷ ಸಂದೀಪ್, ರಾಘವೇಂದ್ರ ಹೆಚ್.ಎಸ್., ಸುಧೀಂದ್ರ ಪಂಡಿತ್, ವಿಶ್ವನಾಥ್, ಸನ್ಟೈಮ್ ಲೋಕೇಶ್, ಚಂದ್ರಶೇಖರ್, ಅನೂಪ್, ಅರವಿಂದ್, ಸುಬ್ರಹ್ಮಣ್ಯ, ಭರತ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
















Leave a Reply