ಅರಣ್ಯ ಸಚಿವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಸದ ಬಿ.ವೈ.ರಾಘವೇಂದ್ರ|ಮನವಿಯಲ್ಲೇನಿದೆ?

Addaheading 20260821 190256 0000 ಅರಣ್ಯ ಸಚಿವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಸದ ಬಿ.ವೈ.ರಾಘವೇಂದ್ರ|ಮನವಿಯಲ್ಲೇನಿದೆ?
Spread the love

ಬೆಂಗಳೂರು :ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಲವು ವರ್ಷಗಳಿಂದ ಬಾಕಿಯಿರುವ ಅರಣ್ಯ, ವನ್ಯಜೀವಿ ಹಾಗೂ ಪುನರ್ವಸತಿ ಸಂಬಂಧಿತ ಜ್ವಲಂತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ವಿಸ್ತೃತ ಮನವಿ ಸಲ್ಲಿಸಿದರು.
ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಕೂಡ ಉಪಸ್ಥಿತರಿದ್ದು, ಶೆಟ್ಟಿಹಳ್ಳಿ ಅಭಯಾರಣ್ಯದ ಗಡಿ ಮರು ವಿಂಗಡಣೆ, ಶರಾವತಿ ಸಂತ್ರಸ್ತರ ಪುನರ್ವಸತಿ, ಕೊಡಚಾದ್ರಿ ಕೇಬಲ್ ಕಾರ್ ಯೋಜನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಪ್ರಮುಖ ಬೇಡಿಕೆಗಳು

1.ಶೆಟ್ಟಿಹಳ್ಳಿ ವನ್ಯಜೀವಿಧಾಮದ ಅಂತಿಮ ಗಡಿ ಅಧಿಸೂಚನೆ ಹಾಗೂ ಬಫರ್ ಜೋನ್ ತಿದ್ದುಪಡಿ.
2.ಶರಾವತಿ ಲಯನ್-ಟೇಲ್ಡ್ ಮಕಾಕ್ ಅಭಯಾರಣ್ಯದ ಗಡಿ ಅಂತಿಮಗೊಳಿಸುವಿಕೆ.
3.ಶರಾವತಿ ಸಂತ್ರಸ್ತರ ಪುನರ್ವಸತಿ ಪ್ರಕ್ರಿಯೆ ವೇಗಗೊಳಿಸುವುದು.
4.ಎಂ.ಪಿ.ಎಂ. ಅರಣ್ಯ ವ್ಯಾಪ್ತಿಯ ನಿರ್ವಹಣಾ ಯೋಜನೆಗೆ ಅನುಮೋದನೆ.
5.ರಾಷ್ಟ್ರೀಯ ಹೆದ್ದಾರಿ 766C ಕಾಮಗಾರಿಗೆ ಅಗತ್ಯ ಅರಣ್ಯ ಅನುಮತಿ.
6.ಕೊಡಚಾದ್ರಿ–ಕೊಲ್ಲೂರು ಕೇಬಲ್ ಕಾರ್ ಯೋಜನೆಗೆ ಪರಿಸರ ಮತ್ತು ವನ್ಯಜೀವಿ ಮಂಜೂರಾತಿ.

ಸಂಸದರ ಮನವಿಗೆ ಸಚಿವ ರಾಮಲಿಂಗಾರೆಡ್ಡಿ ಸಕಾರಾತ್ಮಕ ಸ್ಪಂದನೆ ವ್ಯಕ್ತಪಡಿಸಿ, ಸಂಬಂಧಿತ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

file 000000003f5c8208a0b120fec3430d9d4430031810171159024 ಅರಣ್ಯ ಸಚಿವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಸದ ಬಿ.ವೈ.ರಾಘವೇಂದ್ರ|ಮನವಿಯಲ್ಲೇನಿದೆ?

Leave a Reply

Your email address will not be published. Required fields are marked *