ಹೊಸನಗರದ ರವಿಕುಮಾರ್‌ಗೆ ಎಕ್ಸಲೆನ್ಸ್ ಐಕಾನ್ ಹಾನರ್ ಪ್ರಶಸ್ತಿ | ಸಮಾಜಸೇವೆ ಹಾಗೂ ಕೈಗಾರಿಕಾ ಸಾಧನೆಗೆ ಗೌರವ

Addaheading 20260806 153733 0000 ಹೊಸನಗರದ ರವಿಕುಮಾರ್‌ಗೆ ಎಕ್ಸಲೆನ್ಸ್ ಐಕಾನ್ ಹಾನರ್ ಪ್ರಶಸ್ತಿ | ಸಮಾಜಸೇವೆ ಹಾಗೂ ಕೈಗಾರಿಕಾ ಸಾಧನೆಗೆ ಗೌರವ
Spread the love

ಹೊಸನಗರ: ಕಳೆದ ಹಲವು ವರ್ಷಗಳಿಂದ ಹೊಸನಗರ ತಾಲ್ಲೂಕಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕ ಸೇರಿದಂತೆ ಅಗತ್ಯ ಶಿಕ್ಷಣ ಸಾಮಗ್ರಿಗಳನ್ನು ವಿತರಿಸುತ್ತಾ, ಬಡ ಹಾಗೂ ಅಗತ್ಯವಿರುವ ಕುಟುಂಬಗಳಿಗೆ ಸಹಾಯಹಸ್ತ ಚಾಚುತ್ತಿರುವ ಹೊಸನಗರ ತಾಲ್ಲೂಕಿನ ಗುಳ್ಳೆಕೊಪ್ಪ ಗ್ರಾಮದ ರವಿಕುಮಾರ್ ಅವರಿಗೆ ‘ಎಕ್ಸಲೆನ್ಸ್ ಐಕಾನ್ ಹಾನರ್ ಪ್ರಶಸ್ತಿ’ ನೀಡಿ ವಿಜಯ ಕರ್ನಾಟಕ ತಂಡ ಗೌರವಿಸಿದೆ.

    ರವಿಕುಮಾರ್ ಅವರು ಸುಮಾರು 25 ವರ್ಷಗಳ ಇತಿಹಾಸ ಹೊಂದಿರುವ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಉತ್ತಮ ಗುಣಮಟ್ಟದ ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನೆಲ್‌ಗಳನ್ನು ದೇಶ-ವಿದೇಶಗಳಿಗೆ ಪೂರೈಸುವ ಮೂಲಕ ಕೈಗಾರಿಕಾ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ.

    ಅವರ ಈ ಸಾಧನೆಯನ್ನು ಗುರುತಿಸಿ ಕಳೆದ ವರ್ಷ ಭಾರತ ಸರ್ಕಾರದಿಂದ ‘ಮೇಕ್ ಇನ್ ಇಂಡಿಯಾ’ ಪ್ರಶಸ್ತಿಯೂ ಲಭಿಸಿತ್ತು. ಇದೀಗ ಸಮಾಜಸೇವೆ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿನ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ  ವಿಕ ತಂಡ ಎಕ್ಸಲೆನ್ಸ್ ಐಕಾನ್ ಹಾನರ್ ಪ್ರಶಸ್ತಿ ನೀಡಿ ಗೌರವಿಸಿದೆ.

file 000000003f5c8208a0b120fec3430d9d6561055219911297758 ಹೊಸನಗರದ ರವಿಕುಮಾರ್‌ಗೆ ಎಕ್ಸಲೆನ್ಸ್ ಐಕಾನ್ ಹಾನರ್ ಪ್ರಶಸ್ತಿ | ಸಮಾಜಸೇವೆ ಹಾಗೂ ಕೈಗಾರಿಕಾ ಸಾಧನೆಗೆ ಗೌರವ

Leave a Reply

Your email address will not be published. Required fields are marked *

error: Content is protected !!