ಅರಸಾಳು ಮತ್ತು ಕುಂಸಿ ಸೇರಿ ಹಲವು ನಿಲ್ದಾಣಗಳಲ್ಲಿ ಎಕ್ಸ್‌ಪ್ರೆಸ್ ರೈಲಿನ ತಾತ್ಕಾಲಿಕ ನಿಲುಗಡೆ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ!

Screenshot 20260703 194933 Google ಅರಸಾಳು ಮತ್ತು ಕುಂಸಿ ಸೇರಿ ಹಲವು ನಿಲ್ದಾಣಗಳಲ್ಲಿ ಎಕ್ಸ್‌ಪ್ರೆಸ್ ರೈಲಿನ ತಾತ್ಕಾಲಿಕ ನಿಲುಗಡೆ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ!
Spread the love

ಶಿವಮೊಗ್ಗ: ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ವಿವಿಧ ರೈಲು ನಿಲ್ದಾಣಗಳಲ್ಲಿ ಕೆಲವು ರೈಲುಗಳಿಗೆ ನೀಡಲಾಗಿದ್ದ ತಾತ್ಕಾಲಿಕ ನಿಲುಗಡೆ ಅವಧಿಯನ್ನು 2026ರ ಸೆಪ್ಟೆಂಬರ್ 30ರವರೆಗೆ ದಕ್ಷಿಣ ಪಶ್ಚಿಮ ರೈಲ್ವೆ ವಿಸ್ತರಿಸಿದೆ. ಈ ಹಿಂದೆ 2026ರ ಜೂನ್ 30ರವರೆಗೆ ಮಾತ್ರ ಜಾರಿಯಲ್ಲಿದ್ದ ತಾತ್ಕಾಲಿಕ ನಿಲುಗಡೆಗಳನ್ನು ಇದೀಗ ಇನ್ನೂ ಮೂರು ತಿಂಗಳ ಕಾಲ ಮುಂದುವರಿಸಲಾಗಿದೆ.

ವಿಸ್ತರಣೆಗೊಂಡಿರುವ ರೈಲುಗಳು ಹಾಗೂ ನಿಲ್ದಾಣಗಳ ವಿವರ ಹೀಗಿದೆ:
56519/56520 ಕೆಎಸ್‌ಆರ್ ಬೆಂಗಳೂರು–ಹೊಸಪೇಟೆ–ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ ರೈಲಿನ ದೇವನೂರು (VNR), ಹೊಳಲಕೆರೆ (HLK) ಹಾಗೂ ಅಮೃತಾಪುರ (AMC) ನಿಲ್ದಾಣಗಳ ತಾತ್ಕಾಲಿಕ ನಿಲುಗಡೆ ಸೆಪ್ಟೆಂಬರ್ 30ರವರೆಗೆ ಮುಂದುವರಿಯಲಿದೆ.
20675/20676 ಬೆಳಗಾವಿ–ಮೈಸೂರು–ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ ಹಾಗೂ 17391/17392 ಕೆಎಸ್‌ಆರ್ ಬೆಂಗಳೂರು–ಸಿಂಧನೂರು–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲುಗಳ ರಾಮಗಿರಿ (RGI) ನಿಲ್ದಾಣದಲ್ಲಿನ ತಾತ್ಕಾಲಿಕ ನಿಲುಗಡೆಯನ್ನೂ ಇದೇ ಅವಧಿಯವರೆಗೆ ವಿಸ್ತರಿಸಲಾಗಿದೆ.
16587/16588 ಯಶವಂತಪುರ–ಬಿಕಾನೇರ್–ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ಬೀರೂರು (RRB) ನಿಲ್ದಾಣ ಹಾಗೂ 17391/17392 ಕೆಎಸ್‌ಆರ್ ಬೆಂಗಳೂರು–ಸಿಂಧನೂರು ಎಕ್ಸ್‌ಪ್ರೆಸ್ ರೈಲಿನ ಚಳಗೇರಿ (CLI) ನಿಲ್ದಾಣದಲ್ಲಿನ ತಾತ್ಕಾಲಿಕ ನಿಲುಗಡೆಯೂ ಸೆಪ್ಟೆಂಬರ್ 30ರವರೆಗೆ ಮುಂದುವರಿಯಲಿದೆ.
20651/20652 ಕೆಎಸ್‌ಆರ್ ಬೆಂಗಳೂರು–ತಾಳಗುಪ್ಪ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಅರಸಾಳು (ARU) ಹಾಗೂ ಕುಂಸಿ (KMSI) ನಿಲ್ದಾಣಗಳ ತಾತ್ಕಾಲಿಕ ನಿಲುಗಡೆಯನ್ನೂ ಇದೇ ಅವಧಿಯವರೆಗೆ ವಿಸ್ತರಿಸಲಾಗಿದೆ.
16579/16580 ಯಶವಂತಪುರ–ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ಚಿಕ್ಕಬಾಣಾವರ (BAW) ನಿಲ್ದಾಣದಲ್ಲಿನ ತಾತ್ಕಾಲಿಕ ನಿಲುಗಡೆಯೂ ಮುಂದುವರಿಯಲಿದೆ.
16239/16240 ಚಿಕ್ಕಮಗಳೂರು–ಯಶವಂತಪುರ–ಚಿಕ್ಕಮಗಳೂರು ಎಕ್ಸ್‌ಪ್ರೆಸ್ ರೈಲಿನ ಸಂಪಿಗೆ ರೋಡ್ (SPGR) ನಿಲ್ದಾಣದಲ್ಲಿನ ತಾತ್ಕಾಲಿಕ ನಿಲುಗಡೆಯನ್ನು ಕೂಡ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
16228 ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ರೈಲಿನ ಮಲ್ಲೇಶ್ವರಂ (MWM) ಹಾಗೂ 16315/16316 ಮೈಸೂರು–ತಿರುವನಂತಪುರಂ ನಾರ್ತ್–ಮೈಸೂರು ಎಕ್ಸ್‌ಪ್ರೆಸ್ ರೈಲಿನ ಮದ್ದೂರು (MAD) ನಿಲ್ದಾಣದಲ್ಲಿನ ತಾತ್ಕಾಲಿಕ ನಿಲುಗಡೆಯೂ ಇದೇ ಅವಧಿಯವರೆಗೆ ಮುಂದುವರಿಯಲಿದೆ.
66553 ಕೆಎಸ್‌ಆರ್ ಬೆಂಗಳೂರು–ಅಶೋಕಪುರಂ ಮೆಮು ರೈಲಿನ ಕೃಷ್ಣದೇವರಾಯ ಹಾಲ್ಟ್ (KNDV) ನಿಲ್ದಾಣದಲ್ಲಿನ ತಾತ್ಕಾಲಿಕ ನಿಲುಗಡೆಯನ್ನೂ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
66519/66520 ಮಾರಿಕುಪ್ಪಂ–ಕೆಎಸ್‌ಆರ್ ಬೆಂಗಳೂರು–ಮಾರಿಕುಪ್ಪಂ ಮೆಮು ಹಾಗೂ 16521 ಬಂಗಾರಪೇಟೆ–ಕೆಎಸ್‌ಆರ್ ಬೆಂಗಳೂರು ಮೆಮು ರೈಲುಗಳ ದೇವನಗೊಂಡಿ (DKN) ನಿಲ್ದಾಣದಲ್ಲಿನ ತಾತ್ಕಾಲಿಕ ನಿಲುಗಡೆಯನ್ನೂ ಇದೇ ಅವಧಿಯವರೆಗೆ ಮುಂದುವರಿಸಲಾಗಿದೆ.

Leave a Reply

Your email address will not be published. Required fields are marked *