ಶಿಕಾರಿಪುರದಿಂದ ಮಂಗಳೂರಿಗೆ ಹೊರಟ ಮೆಕ್ಕೆಜೋಳ ಲಾರಿ ನಿಟ್ಟೂರು ಸಮೀಪ ಬೆಂಕಿಗಾಹುತಿ!

Screenshot 20260627 100521 Canva ಶಿಕಾರಿಪುರದಿಂದ ಮಂಗಳೂರಿಗೆ ಹೊರಟ ಮೆಕ್ಕೆಜೋಳ ಲಾರಿ ನಿಟ್ಟೂರು ಸಮೀಪ ಬೆಂಕಿಗಾಹುತಿ!
Spread the love
img 20260110 wa00004717986001626984212 ಶಿಕಾರಿಪುರದಿಂದ ಮಂಗಳೂರಿಗೆ ಹೊರಟ ಮೆಕ್ಕೆಜೋಳ ಲಾರಿ ನಿಟ್ಟೂರು ಸಮೀಪ ಬೆಂಕಿಗಾಹುತಿ!

ಹೊಸನಗರ: ಶಿಕಾರಿಪುರದಿಂದ ಮಂಗಳೂರಿಗೆ ಮೆಕ್ಕೆಜೋಳ ಸಾಗಿಸುತ್ತಿದ್ದ ಲಾರಿಯೊಂದರಲ್ಲಿ ಚಲಿಸುತ್ತಿರುವಾಗಲೇ ಇಂಜಿನ್‌ಗೆ ಬೆಂಕಿ ಕಾಣಿಸಿಕೊಂಡು ಲಾರಿಯ ಮುಂಭಾಗ ಸಂಪೂರ್ಣ ಸುಟ್ಟುಹೋದ ಘಟನೆ ತಾಲೂಕಿನ ನಿಟ್ಟೂರು ಸಮೀಪದ ಬೇಳೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ತಡರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ವಾಹನ ಚಾಲಕ ಮಹಮ್ಮದ್ ಹುಸೇನ್ ಸಮಯಪ್ರಜ್ಞೆಯಿಂದ ಲಾರಿಯನ್ನು ರಸ್ತೆ ಬದಿಗೆ ನಿಲ್ಲಿಸಿ ಹೊರಬಂದಿದ್ದು, ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.

image editor output image 1976575691 17825352773002338778259266706937 ಶಿಕಾರಿಪುರದಿಂದ ಮಂಗಳೂರಿಗೆ ಹೊರಟ ಮೆಕ್ಕೆಜೋಳ ಲಾರಿ ನಿಟ್ಟೂರು ಸಮೀಪ ಬೆಂಕಿಗಾಹುತಿ!


ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ನೆರವಿಗೆ ಧಾವಿಸಿದ್ದು, ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅಷ್ಟರಲ್ಲಾಗಲೇ ಲಾರಿಯ ಮುಂಭಾಗ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು.

ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ, ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಅಲ್ಪ ಪ್ರಮಾಣದಲ್ಲಿ ಮೆಕ್ಕೆಜೋಳ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ.

image editor output image 461186626 17825352967271118932593504841580 ಶಿಕಾರಿಪುರದಿಂದ ಮಂಗಳೂರಿಗೆ ಹೊರಟ ಮೆಕ್ಕೆಜೋಳ ಲಾರಿ ನಿಟ್ಟೂರು ಸಮೀಪ ಬೆಂಕಿಗಾಹುತಿ!



ಪ್ರಾಥಮಿಕ ಮಾಹಿತಿಯಂತೆ ಇಸಿಎಂ (ECM) ದೋಷದಿಂದ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆಯಾದರೂ, ತನಿಖೆ ಪೂರ್ಣಗೊಂಡ ನಂತರವೇ ಬೆಂಕಿಗೆ ನಿಖರ ಕಾರಣ ತಿಳಿಯಲಿದೆ ಎಂದು ನಗರ ಪೊಲೀಸ್ ಠಾಣೆಯ ಪಿಎಸ್‌ಐ ಕೋಳಿವಾಡ ತಿಳಿಸಿದ್ದಾರೆ.

img 20260604 wa00396902540899459843929 ಶಿಕಾರಿಪುರದಿಂದ ಮಂಗಳೂರಿಗೆ ಹೊರಟ ಮೆಕ್ಕೆಜೋಳ ಲಾರಿ ನಿಟ್ಟೂರು ಸಮೀಪ ಬೆಂಕಿಗಾಹುತಿ!

Leave a Reply

Your email address will not be published. Required fields are marked *