ತಾಲೂಕಿನ ಎಲ್ಲೆಡೆ ಅಂತರಾಷ್ಟ್ರೀಯ ಯೋಗ ದಿನ ಆಚರಣೆ 

Screenshot 20260621 220831 Canva ತಾಲೂಕಿನ ಎಲ್ಲೆಡೆ ಅಂತರಾಷ್ಟ್ರೀಯ ಯೋಗ ದಿನ ಆಚರಣೆ 
Spread the love

ಯೋಗ ದೈಹಿಕ ಕಸರತ್ತಷ್ಟೇ ಅಲ್ಲ, ದೇಹ-ಮನಸ್ಸು-ಆತ್ಮವನ್ನು ಬೆಸೆಯುವ ಶಕ್ತಿ: ಹೆಚ್.ಆರ್. ಸುರೇಶ್

ಹೊಸನಗರ : ಯೋಗವು ಕೇವಲ ದೈಹಿಕ ಕಸರತ್ತು ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಅದು ದೇಹ, ಮನಸ್ಸು ಹಾಗೂ ಆತ್ಮವನ್ನು ಒಂದಾಗಿಸುವ ಶಕ್ತಿಶಾಲಿ ಮಾಧ್ಯಮವಾಗಿದೆ ಎಂದು ಮಾವಿನಕೊಪ್ಪ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯರಾದ ಹೆಚ್.ಆರ್. ಸುರೇಶ್ ಹೇಳಿದರು.

img 20260621 wa00486241630663537052047 ತಾಲೂಕಿನ ಎಲ್ಲೆಡೆ ಅಂತರಾಷ್ಟ್ರೀಯ ಯೋಗ ದಿನ ಆಚರಣೆ 
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕಾರಣಗಿರಿ  ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ಗ್ರಾಮಭಾರತಿ ಟ್ರಸ್ಟ್ ಮತ್ತು ರಾಷ್ಟ್ರೋತ್ಥಾನ ಬಳಗ ವತಿಯಿಂದ ಯೋಗ ದಿನಾಚರಣೆ ಆಚರಿಸಲಾಯಿತು.

ಅವರು ಶಾಲೆಯಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಹಾಗೂ ತರಬೇತಿ ಕಾರ್ಯಕ್ರಮ ನಡೆಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆಯಾದ ಯೋಗವನ್ನು ಜಗತ್ತಿನಾದ್ಯಂತ ಸ್ವೀಕರಿಸಲಾಗಿದೆ. ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದರಿಂದ ಮಾನಸಿಕ ಒತ್ತಡಗಳಿಂದ ಮುಕ್ತರಾಗಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬಹುದು ಎಂದು ತಿಳಿಸಿದರು.

img 20260621 wa00463348030305093390367 ತಾಲೂಕಿನ ಎಲ್ಲೆಡೆ ಅಂತರಾಷ್ಟ್ರೀಯ ಯೋಗ ದಿನ ಆಚರಣೆ 
ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳೆಲ್ಲರೂ ಯೋಗ ದಿನದಂದು ಭಾಗವಹಿಸಿದರು.
image editor output image 578237948 1782059362224313878350428782565 ತಾಲೂಕಿನ ಎಲ್ಲೆಡೆ ಅಂತರಾಷ್ಟ್ರೀಯ ಯೋಗ ದಿನ ಆಚರಣೆ 
ಹೊಸನಗರ ಪಟ್ಟಣದ ಮೈದಾನದಲ್ಲಿ ಬಾಲಕರು ಯೋಗ ಮಾಡುತ್ತಿರುವ ದೃಶ್ಯ
img 20260621 wa00492504357549440957138 ತಾಲೂಕಿನ ಎಲ್ಲೆಡೆ ಅಂತರಾಷ್ಟ್ರೀಯ ಯೋಗ ದಿನ ಆಚರಣೆ 
ರಿಪ್ಪನ್ ಪೇಟೆಯ ವಿಶ್ವಮಾನವ ಸಭಾಭವನದಲ್ಲಿ  ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

Leave a Reply

Your email address will not be published. Required fields are marked *