
ಶಿವಮೊಗ್ಗ : ಸಂಚಾರಿ ಪೊಲೀಸರು ಇಂದು ವಿಶೇಷ ಕಾರ್ಯಾಚರಣೆ ನಡೆಸಿ, ನಗರದಲ್ಲಿ ಸಂಚರಿಸುವ 92ಕ್ಕೂ ಹೆಚ್ಚು ಶಾಲಾ ಬಸ್‌ಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನಾಲ್ಕು ಶಾಲಾ ಬಸ್ ಚಾಲಕರು ಮದ್ಯಪಾನ ಸೇವಿಸಿರುವುದು ಪತ್ತೆಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಐದು ಚಾಲಕರು ಯೂನಿಫಾರ್ಮ್ ಧರಿಸಿರಲಿಲ್ಲ. ಐದು ಬಸ್‌ಗಳ ಫಿಟ್‌ನೆಸ್ ಅವಧಿ ಮುಗಿದಿತ್ತು. ಚಾಲಕರ ಆರೋಗ್ಯ ಪ್ರಮಾಣಪತ್ರ ಹಾಗೂ ಬಸ್‌ಗಳ ಸ್ವಚ್ಛತೆ ಮತ್ತು ದಾಖಲೆಗಳನ್ನು ಪರಿಶೀಲಿಸಲಾಯಿತು. ಹಾಗೆಯೇ ಚಾಲಕರು ಮತ್ತು ಶಾಲಾ ಸಂಸ್ಥೆಗಳ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು.

ಸಂಚಾರಿ ಪೊಲೀಸರ ಈ ಕ್ರಮ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಸಾವಿರಾರು ಮಕ್ಕಳು ಪ್ರತಿನಿತ್ಯ ಶಾಲಾ ಬಸ್‌ಗಳಲ್ಲಿ ಸಂಚರಿಸುತ್ತಿದ್ದು, ಕೆಲವು ಬಸ್ ಚಾಲಕರು ನಿಯಮ ಮೀರಿ ವರ್ತಿಸುವುದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರ ಬಗ್ಗೆ ಪೋಷಕರು ಸಂಚಾರಿ ಪೊಲೀಸರ ಗಮನಕ್ಕೂ ತಂದಿದ್ದರು.
ನಗರದ ಅನೇಕ ಶಾಲಾ ಬಸ್‌ಗಳ ಫಿಟ್‌ನೆಸ್ ಅವಧಿ ಮುಗಿದಿದ್ದು, ಆಡಳಿತ ಮಂಡಳಿಯ ನಿರ್ಲಕ್ಷ್ಯ ಧೋರಣೆ ತಳೆದಿತ್ತು. ಈ ಬಗ್ಗೆ ಕೂಡ ಶಾಲಾ-ಕಾಲೇಜು ಆಡಳಿತ ಮಂಡಳಿಗೆ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಕಾರ್ಯಾಚರಣೆಯ ನೇತೃತ್ವವನ್ನು ಸಂಚಾರಿ ಪೊಲೀಸ್ ಇನ್‌ಸ್ಪೆಕ್ಟರ್ ದೇವರಾಜ್ ವಹಿಸಿದ್ದರು. ಸಬ್ ಇನ್‌ಸ್ಪೆಕ್ಟರ್ ಸ್ವಪ್ನಾ, ಭಾರತಿ ಸೇರಿದಂತೆ ಸಂಚಾರಿ ಎಎಸ್‌ಐ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

















Leave a Reply